ಬೆಂಗಳೂರು : ನಾಯಿ ನೋಡೋಕೆ ತುಂಬಾ ಕ್ಯೂಟ್ ಆಗಿದೆ. ಒಂದು ಸಾರಿ ಮುದ್ದು ಮಾಡಬಹುದಾ ಅಂತಾ ವಾಕಿಂಗ್ ಮಾಡುತ್ತಿದ್ದ ಯುವತಿಗೆ ಕೇಳಿದ ಯುವಕ ನಾಯಿ ಮುದ್ದಾಡುವ ನೆಪದಲ್ಲಿ ಯುವತಿಗೆ ಬ್ಯಾಡ್ ಟಚ್ ಮಾಡಿದ್ದಾನೆ. ಬಳಿಕ ಕ್ಷಣಾಮಾತ್ರದಲ್ಲಿ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪಕಾರ್ ಲೇಔಟ್‌ನಲ್ಲಿ ರಾತ್ರಿ ಸುಮಾರು 10:30ಕ್ಕೆ ನಡೆದಿದೆ.
ಈ ಸಂಬಂಧ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೃತ್ಯವೆಸಗಿದ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಕೊಕ್! ಆರ್‌ಸಿಬಿ ರಿಟೇನ್, ರಿಲೀಸ್ ಸಂಪೂರ್ಣ ಪಟ್ಟಿ ಇಲ್ಲಿದೆ



















