ಬೆಂಗಳೂರು : ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ದುರಂತ ನಡೆದಿದೆ. ತನ್ನ ತಂದೆ ಕಾರಿಗೆ ಸಿಲುಕಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ತೋಟದಗುಡ್ಡದಹಳ್ಳಿ ಬೆನಕ ಲೇಔಟ್ ನಲ್ಲಿ ನಡದಿದೆ.
ದೇವಿಕಾ ಹಾಗೂ ಮುನೇಶ್ ದಂಪತಿಗಳ 1ವರ್ಷದ 10ತಿಂಗಳ ನೂತನ್ ಎಂಬ ಮಗು ಸಾವನ್ನಪ್ಪಿದೆ. ಮನೆಯ ಮುಂದೆ ಆಟವಾಡುವ ವೇಳೆ ಗಮನಿಸದೆ ಕಾರು ಡಿಕ್ಕಿಯಾಗಿ ಮಗು ಮೃತಪಟ್ಟಿದೆ.
ಮಂಡ್ಯ ಜಿಲ್ಲೆ ಬೂವಿನದೊಡ್ಡಿಯ ಊರಿಗೆ KA17-Z6211 ಮಾರುತಿ ಇಕೋ ಕಾರಿನಲ್ಲಿ ಹೊರಡುವ ವೇಳೆ ದುರಂತ ಸಂಭವಿಸಿದೆ. ಮೂರು ದಿನಗಳ ಹಿಂದೆಯಷ್ಟೇ ಬಾಮೈದ ಮೋಹನ್ ಅವರ ಮನೆಗೆ ಬಂದಿದ್ದರು. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅಪ್ರಾಪ್ತೆಯ ಮೇಲೆ ಮನೆ ಮಾಲೀಕನಿಂದಲೇ ಅತ್ಯಾಚಾರ | ಸಾಥ್ ನೀಡಿದ ಮಹಿಳೆ ಸೇರಿ ಇಬ್ಬರ ಬಂಧನ


















