ಮಂಗಳೂರು : ಬೀದಿ ನಾಯಿಯೊಂದು ದಾಳಿ ನಡೆಸಿ ವೃದ್ಧನ್ನು ಕಣ್ಣುಗುಡ್ಡೆಯನ್ನು ಕಿತ್ತು ಹಾಕಿ ರಕ್ತಸಿಕ್ತ ಸ್ಥಿತಿಯಲ್ಲಿ ಬಲಿ ಪಡೆದಿದ್ದು, ಸ್ಥಳೀಯರು ಆ ನಾಯಿಯನ್ನು ಸೆರೆಹಿಡಿದಿದ್ದಾರೆ.
ಮುಂಜಾನೆ ಶ್ವಾನವು ವೃದ್ಧನನ್ನು ಕಚ್ಚಿ ಸಾಯಿಸಿದ್ದ ಘಟನೆ ಮಂಗಳೂರಿನ ಕಡಲನಗರಿಯಲ್ಲಿ ನಡೆದಿದೆ. ಅವಿವಾಹಿತರಾಗಿದ್ದ ದಯಾನಂದ, ಕುಡಿತದ ಚಟ ಹೊಂದಿದ್ದು ರಾತ್ರಿ ವೇಳೆ ಸ್ಥಳೀಯವಾಗಿ ನೇಮ, ಕೋಲ, ಜಾತ್ರೆಗಳಿಗೆ ತೆರಳಿ ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗಿನ ವೇಳೆ ಮನೆ ಸೇರುತ್ತಿದ್ದರು.
ಇಂದು ಮುಂಜಾನೆ 3:30ರ ವೇಳೆಗೆ ಅಂಗಡಿಯೊಂದರ ಮುಂಭಾಗ ದಯಾನಂದ ಇದ್ದಿದ್ದನ್ನು ಅಂಗಡಿ ಮಾಲೀಕ ವಿನೋದ್ ಎಂಬುವವರು ನೋಡಿದ್ದಾರೆ. ಆದಾದ ಬಳಿಕ ಬೆಳಗ್ಗೆ 7:30ರ ಸುಮಾರಿಗೆ ಪಕ್ಕದ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೊಬ್ಬರ ಕಣ್ಣು ಗುಡ್ಡೆಯೊಂದು ಬಿದ್ದಿರೋದು, ರಕ್ತಸಿಕ್ತವಾಗಿರೋದು ಕಂಡು ಬಂದಿದೆ. ಇನ್ನಷ್ಟು ಪರಿಶೀಲನೆ ಮಾಡಿದಾಗ ಅಂಗಡಿ ಸಮೀಪದ ಮನೆಯೊಂದರ ಮುಂಭಾಗ ದಯಾನಂದ ಮೃತದೇಹ ಪತ್ತೆಯಾಗಿದೆ. ಮೃತದೇಹ ಪಕ್ಕದಲ್ಲೇ ನಾಯಿ ಕೂಡ ಇದ್ದು ಬೀದಿ ನಾಯಿ ದಾಳಿಯ ಅನುಮಾನ ಇನ್ನಷ್ಟು ಬಲವಾಗಿತ್ತು.ಬಳಿಕ ಪೋಲಿಸರ ದಾಳಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಬೀದಿನಾಯಿ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಜನ ಆಘಾತ ವ್ಯಕ್ತಪಡಿಸಿದ್ದಾರೆ. ದೊಡ್ಡವರನ್ನೇ ಬಿಡದ ಬೀದಿನಾಯಿಗಳು ಮಕ್ಕಳನ್ನು ಜೀವಂತ ಬಿಡಬಹುದಾ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇನ್ನೊಂದು ಪ್ರಾಣ ಹೋಗುವ ಮೊದಲು ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ : ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಡೆಡ್ಲಿ ಆಕ್ಸಿಡೆಂಟ್ | ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು – 5 ಮಂದಿ ಸಾವು



















