ಹುಬ್ಬಳ್ಳಿ : ಚಾಕುವಿನಿಂದ ಇರಿದು ಯುವಕನ ಕೊಲೆ ಪ್ರಕರಣ ಸಂಬಂಧ ಪಟ್ಟಂತೆ, ಮರಣೋತ್ತರ ಪರೀಕ್ಷೆಯ ನಂತರ ಶವ ಹಸ್ತಾಂತರಿಸಲಾಗಿದೆ. ಶವ ಕೊಂಡಯ್ಯುವಾಗ ಮಾರ್ಗ ಮಧ್ಯಮದಲ್ಲಿ ಆಂಬುಲೆನ್ಸ್ ನಿಲ್ಲಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ಮಾಡಿ, ಬಳಿಕ ಕೆ.ಇ.ಬಿ. ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಿನ್ನೆ ಮಹ್ಮದ್ ಮಲ್ಲಿಕ್ ಜಾನ್ ಅಲಿಯಾಸ್ ಮೆಂಡೆ ಮಲ್ಲಿಕ್ (25) ಎಂಬಾತನನ್ನು ಕೊಲೆಗೈದಿದ್ದಾರೆ. ಗುಂಪೊಂದರಿಂದ ಮಲಿಕ್ ಮೇಲೆ ಏಕಾಏಕಿ ದಾಳಿ ಮಾಡಿ ಚಾಕು ಇರಿಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಿಕ್ ನನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಲಿಕ್ ಸಾವನ್ನಪ್ಪಿದ್ದಾನೆ.
ಘಟನೆಗೆ ಬೆಂಡಿಗೇರಿ ಪೊಲೀಸರ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸುತ್ತಿರುವ ಮೃತನ ಸಂಬಂಧಿಕರು, ಬೆಂಡಿಗೇರಿ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶಿಸಿದ್ದಾರೆ. ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬಳಿಕ ಪೋಲಿಸರು ಪ್ರತಿಭಟನಾಕಾರರನ್ನ ಮನವೋಲಿಸಿ ಸ್ಮಶಾಣದತ್ತ ಕಳುಹಿಸಿದ್ದಾರೆ.
ಇದನ್ನೂ ಓದಿ : ಬಾಲಿವುಡ್‌ನ ಹಿರಿಯ ನಟಿ ಕಾಮಿನಿ ಕೌಶಲ್ ನಿಧನ



















