ಉಡುಪಿ : ಬಿಹಾರದ ಚುನಾವಣೆಯಲ್ಲಿ NDA ಅಭೂತಪೂರ್ವ ಗೆಲುವು. ಬಿಜೆಪಿ ಮತ್ತು ನರೇಂದ್ರ ಮೋದಿ ನೇತೃತ್ವವನ್ನು ಬಿಹಾರದ ಜನತೆ ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಬಿಜೆಪಿಯಿಂದ ಮಾತ್ರ ಒಳ್ಳೆಯ ನೇತೃತ್ವ ಸಾಧ್ಯ. ಅದು ಮತ್ತೆ ಸಾಬೀತಾಗುತ್ತಿದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಮಾಧ್ಯಮಗಾರರೊಂದಿಗೆ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಯಥಾಪ್ರಕಾರ ಕಾಂಗ್ರೆಸ್ ಎರಡಂಕಿ ದಾಟಲಿಲ್ಲ, ಹೀನಾಯವಾಗಿ ಸೋತಿದೆ. ಕಾಂಗ್ರೆಸ್ ನಾಯಕರು ವಿದೇಶದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪರಿಸ್ಥಿತಿ ಅಯ್ಯೋ ಅನ್ನುವ ಸ್ಥಿತಿ ತಲುಪಿದೆ. ಮಹಾಘಟಬಂಧನ್ ದೇಶದ ಒಳಿತಿಗೆ ರಚನೆಯಾದ ಸಂಘಟನೆ ಅಲ್ಲ, ಅದು ಮೋದಿಯನ್ನು ವಿರೋಧಿಸಲು ರಚನೆಯಾದ ಘಟಬಂಧನ್ ಎಂದಿದ್ದಾರೆ.
. ಬಿಹಾರದಲ್ಲಿ ಕಾಂಗ್ರೆಸ್ ನಿಂದ ಕಪ್ಪು ಹಣ ಚುನಾವಣೆಗೆ ವಿನಿಯೋಗವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಿಹಾರದ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಲ್ಲಿ ಗೊತ್ತಾಗಬೇಕು ಎಂದು ಹೇಳಿದ್ದಾರೆ.
ಇನ್ನು ಮುಂದೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ಕೈಚೆಲ್ಲಿ ಕುಳಿತುಕೊಳ್ಳುತ್ತದೆ. ಬಿಜೆಪಿ ಮಧ್ಯಂತರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತದೆ. ಶಿವಕುಮಾರ್ ಪರ ಹೈಕಮಾಂಡ್ ನಿಲ್ಲುತ್ತೆ ಅನ್ನುವ ವಾತಾವರಣ ಕುಸಿದು ಬಿದ್ದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಉಳಿತಾರಾ… ಇನ್ನೊಂದು ಪಂಗಡ ಮಾಡಿ ಹೊರ ಹೋಗುತ್ತಾರಾ ಕಾದು ನೋಡಬೇಕು. ದೇಶದ ಜನ ಬಿಜೆಪಿಯನ್ನು ಒಪ್ಪಿಕೊಳ್ಳಲು ಪ್ರಾರಂಭ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮಧ್ಯಂತರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಹಾಸನದಲ್ಲಿ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಮರಕ್ಕೆ ಡಿಕ್ಕಿ | 10ಕ್ಕೂ ಹೆಚ್ಚು ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ!



















