ಬಾಗಲಕೋಟೆ: ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಪಾದಚಾರಿ, ಬೈಕ್ ಸವಾರ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಕ್ರಾಸ್ ಬಳಿ ನಡೆದಿದೆ.
ಖಾಸಗಿ ಶಿಕ್ಷಕ ಗಣಪತಿ ಬತ್ತಿ (32), ತಾಪಸ್‌ಕುಮಾರ ದುಲಾಯಿ(46) , ಬೆಲ್ಲದ ಕಾರ್ಖಾನೆ ಕಾರ್ಮಿಕ ಈ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಸಾಂಗ್ಲಿಯಿಂದ ಮುಧೋಳ ಕಡೆ ಬರುತ್ತಿದ್ದ ಕಾರು, ಬೈಕ್‌ಗೆ ಹಾಗೂ ಪಾದಚಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಅಪಘಾತದಲ್ಲಿ ಕಾರು ಚಾಲಕ ಸುಭಾಷ್ ರಾಮತೀರ್ಥಗೆ ಗಾಯವಾಗಿದ್ದು, ಮುಧೋಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದಲ್ಲಿ ಇನ್ನೋರ್ವ ವ್ಯಕ್ತಿ ಮೃತಪಟ್ಟಿದ್ದು, ಸದ್ಯ ಆತನ ಹೆಸರು, ವಿಳಾಸವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶಾಸಕ ಸತೀಶ್ ಸೈಲ್ ವೈದ್ಯಕೀಯ ಜಾಮೀನು ನ.20ರವರೆಗೆ ವಿಸ್ತರಣೆ!



















