ನವದೆಹಲಿ: ಕೆಂಪು ಕೋಟೆ ಸ್ಫೋಟದ ಆಘಾತದಿಂದ ಇನ್ನೂ ದೆಹಲಿಯಲ್ಲಿ ಭೀತಿ ಮಾಸುವ ಮುನ್ನವೇ ಇದೀಗ ಮತ್ತೊಂದು ಸ್ಪೋಟದ ಶಬ್ಧ ಕೇಳಿಬಂದಿದೆ. ಇಂದು (ಗುರುವಾರ ) ಬೆಳ್ಳಂಬೆಳಗ್ಗೆ 9:18ರ ಸುಮಾರಿಗೆ ಮಹಿಪಾಲ್ಪುರದ ರಾಡಿಸನ್ ಹೋಟೆಲ್ ಬಳಿ ಭಯಂಕರ ಸ್ಫೋಟದ ಶಬ್ದದಿಂದ ದೇಶದ ಹೃದಯ ಭಾಗವೇ ನಡುಗಿದೆ.
ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ. ಕೇವಲ ಮೂರು ದಿನಗಳ ಹಿಂದೆ ನ.10ರಂದು ಕೆಂಪು ಕೋಟೆಯ ಹೊರಗೆ ನಡೆದ ಭೀಕರ ಕಾರು ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದರು. ಡಜನ್ಗಟ್ಟಲೆ ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಮತ್ತೊಂದು ಸ್ಫೋಟದ ಶದ್ಧದಿಂದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಕೆಂಪು ಕೋಟೆ ಸ್ಫೋಟದ ನಂತರ ದೆಹಲಿ ಸಂಪೂರ್ಣ ಹೈ ಅಲರ್ಟ್‌ನಲ್ಲಿದೆ. ಎಲ್ಲ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತಿದ್ದು, ಆದರೂ ಮತ್ತೊಂದು ಸ್ಫೋಟದ ಶಬ್ದ ಕೇಳಿಸಿರುವುದು ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆ ಮಾಡುವಂತಿದೆ.
ಇದನ್ನೂ ಓದಿ: ದೆಹಲಿ ಸ್ಫೋಟ | ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ ಪ್ರಧಾನಿ ಮೋದಿ



















