ಕೆಡಿ ಸಿನಿಮಾ ಮೂಲಕ ಭಾರೀ ಕುತೂಹಲ ಮೂಡಿಸಿರುವಂತಹ ಧ್ರುವ ಸರ್ಜಾ ಈಗ ಅದರ ರಿಲೀಸ್ಗೆ ಮೊದಲೇ ಮತ್ತೊಂದು ಸಿನಿಮಾದ ರೆಡಿಯಲ್ಲಿದ್ದಾರೆ.

ಕೆಡಿ ಕೆಲಸ ಮುಗಿಸಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಧ್ರುವ ಇದೇ ತಿಂಗಳ 18ಕ್ಕೆ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಧ್ರುವ ಸರ್ಜಾ ಮತ್ತು ಕೀರ್ತಿ ಸುರೇಶ್ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಧ್ರುವ ಸರ್ಜಾ ಅವರು ಮತ್ತೊಂದು ಭರ್ಜರಿ ಸಿನಿಮಾ ಮೂಲಕ ಬರಲಿದ್ದಾರೆ. ಕೆಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು ಕೆಡಿ ಕೆಲಸ ಮುಗಿಸಿ ಧ್ರುವ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಕೆರೆಬೇಟೆ ಚಿತ್ರದ ಮೂಲಕ ಭರವಸೆ ಮೂಡಿಸಿರುವ ರಾಜುಗುರು ನಿರ್ದೇಶನದಲ್ಲಿ ಧ್ರುವ ನಟನೆ ಮೂಡಿ ಬರಲಿದೆ. ಧ್ರುವ ಚಿತ್ರ ನಿರ್ಮಾಣ ಮಾಡ್ತಿರುವ ಮುಂಬೈ ಮೂಲದ ಗೋಲ್ಡ್ ಮೈನ್ಸ್ ಬಂಡವಾಳ ಹೂಡಲಿದ್ದಾರೆ.

ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾಗಿ ಪ್ಯಾನ್ ಇಂಡಿಯಾ ನಾಯಕಿಯಾಗಿ ಕೀರ್ತಿ ಸುರೇಶ್ ಜೋಡಿಯಾಗಲಿದ್ದಾರೆ ಎನ್ನಲಾಗಿದೆ. ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬರ್ತಿರುವ ಕೀರ್ತಿ ಸುರೇಶ್ ಈಗಾಗಲೇ ಮಲಯಾಳಂ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಕನ್ನಡದಲ್ಲೂ ಮಿಂಚೋಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ : ಭೂತಾನ್ನಿಂದ ಬರ್ತಿದ್ದಂತೆ ಆಸ್ಪತ್ರೆಗೆ ‘ನಮೋ’ ಭೇಟಿ | ದೆಹಲಿ ಸ್ಫೋಟದ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!



















