ಬೆಂಗಳೂರು : ಯುವಕನೊಬ್ಬ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಪೈಶಾಚಿಕ ಕೃತ್ಯ ಆಡುಗೋಡಿಯ M.R.ನಗರದಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದಾಗ ಕಾಮುಕ ಯುವಕ ಮಾತು ಬಾರದ ಕಾಲು ಸ್ವಾಧೀನವಿಲ್ಲದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿಘ್ನೇಶ್ ಅಲಿಯಾಸ್ ದಾಡು ಎಂಬಾತ ಈ ಕೃತ್ಯವೆಸಗಿದ್ದಾನೆ.

ನ.9ರಂದು ಯುವತಿ ಕುಟುಂಬಸ್ಥರು ಮದುವೆಗೆ ಅಂತಾ ತೆರಳಿದ್ದರು. ಈ ವೇಳೆ ವಿಶೇಷ ಚೇತನ ಯುವತಿಯನ್ನ ಮನೆಯಲ್ಲೇ ಬಿಟ್ಟು ಹೋಗಿದ್ರು. ಗಾಂಜಾ ನಶೆಯಲ್ಲಿದ್ದ ವಿಘ್ನೇಶ್ ಬೀಗ ತೆಗೆದು ಮನೆ ಒಳಗೆ ನುಗ್ಗಿದ್ದಾನೆ. ಬಳಿಕ ಮನೆಯ ಒಳಗಿನಿಂದ ಬೀಗ ಹಾಕಿಕೊಂಡಿದ್ದಾನೆ. ಮಗಳನ್ನು ನೋಡಿಕೊಂಡು ಹೋಗೋಣ ಎಂದು ತಾಯಿ ಮನೆಗೆ ಬಂದಾಗ ಒಳಗಿನಿಂದ ಬೀಗ ಹಾಕಲಾಗಿತ್ತು. ನಂತರ ವಿಶೇಷ ಚೇತನ ಯುವತಿ ತಾಯಿ ಕಾಲಿನಿಂದ ಒದ್ದು ಬಾಗಿಲು ತೆಗೆದಿದ್ದಾರೆ.

ಈ ವೇಳೆ ಮಗಳ ಸ್ಥಿತಿ ಕಂಡು ತಾಯಿ ಬೆಚ್ಚಿಬಿದ್ದಿದ್ದಳು. ಆಸಾಮಿ ವಿಘ್ನೇಶ್ ಬಾಗಿಲ ಬಳಿ ಅವಿತು ಕುಳಿತಿದ್ದ, ವಿಶೇಷ ಚೇತನ ಯುವತಿ ತಾಯಿ ನೋಡ್ತಿದ್ದಂತೆ ಒಳ ಉಡುಪು ಧರಿಸಿ ಎಸ್ಕೇಪ್ ಆಗಿದ್ದಾನೆ. ತಕ್ಷಣ ಸ್ಥಳೀಯರೆಲ್ಲ ಆತನನ್ನ ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಕುಟುಂಬಸ್ಥರು ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದು, ಆಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : CCB ಪೊಲೀಸರ ಕಾರ್ಯಾಚರಣೆ – ನಕಲಿ ಸೇಲ್ ಡೀಡ್ ರಿಜಿಸ್ಟರ್ ಮಾಡಿದ್ದ ಸಬ್ ರಿಜಿಸ್ಟರ್ ರೂಪ ಅರೆಸ್ಟ್!



















