ಹುಬ್ಬಳ್ಳಿ : ಯುವತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡ ಇಬ್ಬರು ಯುವಕರು ಚಾಕು ಹಾಕಿಕೊಂಡಿದ್ದು, ಈ ಘಟನೆ ಹುಬ್ಬಳ್ಳಿಯ ಗ್ಲೋಬಲ್ ಕಾಲೇಜು ಬಳಿ ನಡೆದಿದೆ.
ಇಬ್ಬರೂ ಯುವಕರು ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿಗಳಾಗಿದ್ದು, ಮಣಿಕಂಠ ಮತ್ತು ಆತನ ಸ್ನೇಹಿತರಿಂದ ಚಾಕು ಇರಿತ ಆರೋಪ ಕೇಳಿಬಂದಿದೆ. ಅಭಿಷೇಕ ಬಂಡಿವಂಡರ್ ಮತ್ತು ಮಾರುತಿ ಬಂಡಿವಂಡರ್ ಸ್ನೇಹಿತನ ಜೊತೆ ಹೋಗಿ ಆಪತ್ತಿಗೆ ಸಿಲುಕಿದ್ದಾರೆ.
ತನ್ನ ಸೇಹಿತ ಪವನ್ ಜೊತೆ ಅಭಿಷೇಕ ಮತ್ತು ಮಾರುತಿ ಹೋಗಿದ್ದರು. ಪವನ್ ಮತ್ತು ಮಣಿಕಂಠ ಎನ್ನುವವರು ಒಂದೇ ಯುವತಿಯನ್ನ ಪ್ರೀತಿಸುತ್ತಿರುವುದು ತಿಳಿದುಬಂದಿತು. ಈ ವಿಚಾರಕ್ಕೆ ಪವನ ಮತ್ತು ಮಣಿಕಂಠ ನಡುವೆ ಜಗಳವಾಗಿತ್ತು. ನಿನ್ನೆ ಮಣಿಕಂಠ ಬರ್ತಡೇ ಇತ್ತು.ಹೀಗಾಗಿ ಪವನ್ ಗೆ ಬರುವಂತೆ ಹೇಳಿದ್ದನು. ತನ್ನ ಜೊತೆ ಅಭಿಷೇಕ, ಮಾರುತಿಯನ್ನು ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ ದಿಢೀರನೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.
ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕರೆದುಕೊಂಡು ಹೋಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಜಯಪುರ | ಕಾಲು ಜಾರಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ಮೂವರು ನಾಪತ್ತೆ!



















