ಬೆಂಗಳೂರು : ಉಗ್ರ ಚಟುವಟಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ದೆಹಲಿಯ ಬಾಂಬ್ ದಾಳಿ ಬಗ್ಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದ್ದಾರೆ.
ಇಡೀ ಭಾರತ ಶಾಂತಿಯಿಂದ ಇರಬೇಕು. ಈ ದಾಳಿ ಬಗ್ಗೆ ತನಿಖೆ ಆಗಬೇಕು, ಅವರನ್ನು ಬಂಧಿಸಬೇಕು. ಗುಪ್ತಚರ ಇಲಾಖೆ ವೈಫಲ್ಯ ಆಗಿದೆಯಾ ಎಂಬ ಪ್ರಶ್ನೆಗೆ ನಾವು ಯಾರ ಮೇಲೇ ಕೂಡಾ ಆರೋಪ ಮಾಡಲ್ಲ, ಆರೋಪ ಬೇರೆ ಸಮಯದಲ್ಲಿ ಮಾಡೋಣ. ಮೊದಲು ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದಿದ್ದಾರೆ.
ಇವತ್ತು ನಾವು ಇಲ್ಲಿ ನಮ್ಮ ಎಲ್ಲಾ ಕಲಾಪ್ರಕಾರಗಳ ವಸ್ತು ಪ್ರದರ್ಶನದ ಮಳಿಗೆ ತೆರೆದಿದ್ದೇವೆ. ರಾಜ್ಯದ ನಾನಾ ಭಾಗಗಳ ಕಲಾಕೃತಿಗಳನ್ನು ಉದ್ಘಾಟನೆ ಮಾಡಿದ್ದೇವೆ. ಓಟ್ ಚೋರಿ ಫಾರಂ ಕೊಡಬೇಕಿತ್ತು ಅದನ್ನು ಕೊಡಲು ದೆಹಲಿಗೆ ಹೋಗಿದ್ದೆ ಹಾಗೆಯೇ ಕೊಟ್ಟು ಬಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ದಿಲ್ಲಿ ಸ್ಪೋಟ | ಜೈಶ್ ಮಹಿಳಾ ವಿಂಗ್‌ನ ನಾಯಕಿ, ವೈದ್ಯೆ ಶಾಹಿನಾ ಬಂಧನ



















