ಗದಗ : ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ವಿಚಾರ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ಆರಂಭವಾಗಿದೆ. ಇಡೀ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಮಾಡಿ ದೇಶದಲ್ಲಿ ಅಶಾಂತಿ ಮೂಡಿಸುವ ಈ ಶಕ್ತಿಗಳ ದಮನಕ್ಕೆ ಎಲ್ಲ ಕ್ರಮ ಕೇಂದ್ರ ಮಾಡುತ್ತೆ ಎಂದು ಬಸವರಾಜ್ ಬೊಮ್ಮಯಿ ಭರವಸೆ ನೀಡಿದ್ದಾರೆ.
ದೆಹಲಿ ಸ್ಪೋಟದ ಹಿಂದೆ ಇರುವ ಭಯೋತ್ಪಾದರ ಕನೆಕ್ಷನ್ ಬಗ್ಗೆ ತನಿಖೆ ನಡೆಸಿದ್ದಾರೆ. ಕಾರ್ ಯಾರದ್ದು, ಯಾರಿಗೆ ಮಾರಾಟವಾಗಿತ್ತು ಎಲ್ಲ ವಿಷರ ಬಹಿರಂಗವಾಗುತ್ತೆ. ಬಾಂಬ್ ಬ್ಲಾಸ್ಟ್ ಆದ ನಾಲ್ಕೈದು ಗಂಟೆಯಲ್ಲೇ ಚುರುಕಾದ ಕೆಲಸ ನಡೆಸಿದ್ದಾರೆ. ಇಂದು ಗೃಹ ಸಚಿವ ಅಮಿತ್ ಶಾ ಸಭೆ ಕರೆದಿದ್ದಾರೆ. ಅತೀ ಶೀಘ್ರದಲ್ಲೇ ಕೆಂಪು ಕೋಟೆಯ ಬಳಿ ನಡೆದ ದುರಂತಕ್ಕೆ ಅಂತ್ಯ ಕೇಂದ್ರ ಹಾಡುತ್ತೇ ಎಂದಿದ್ದಾರೆ.
ಹಿಂದೂರಾಷ್ಟ್ರ ಮಾಡಲು ಸಾಧ್ಯವಿಲ್ಲ; ಸಿಎಂ ಹೇಳಿಕೆ ವಿಚಾರ
ಸಿದ್ದರಾಮಯ್ಯ ಅವ್ರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ಕೊಡುತ್ತಾರೆ. ಕೇಂದ್ರದ ಮೇಲೆ ಗೂಬೆ ಕೂರುಸ್ತಾರೆ.ಮಾಡೋದಕ್ಕೇ ಸಾಕಷ್ಟಯ ಕೆಲಸವಿದ್ದರೂ ಕಾಲಹರಣದ ಹೇಳಿಕೆ ಮಾತ್ರ ಚೆನ್ನಾಗಿ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ರಣಜಿ ಟ್ರೋಫಿ | ದೆಹಲಿ ವಿರುದ್ದ ಗೆದ್ದು ಇತಿಹಾಸ ಬರೆದ ಜಮ್ಮು-ಕಾಶ್ಮೀರ!



















