ನವದೆಹಲಿ : ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಇತಿಹಾಸ ಬರೆದಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಡೆಲ್ಲಿ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ ಗೆಲುವು ಪಡೆದಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಎಲೈಟ್ ಡಿ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಜಮ್ಮು ಮತ್ತು ಕಾಶ್ಮೀರ, ಡೆಲ್ಲಿಯನ್ನು 7 ವಿಕೆಟ್‌ಗಳಿಂದ ಮಣಿಸಿde. ಆ ಮೂಲಕ 14 ಅಂಕಗಳನ್ನು ಕಲೆ ಹಾಕಿರುವ ಜಮ್ಮು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಸೋತ ದೆಹಲಿ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ.
ಅಂತಿಮ ಇನಿಂಗ್ಸ್‌ನಲ್ಲಿ ದೆಹಲಿ ನೀಡಿದ್ದ 179 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಮ್ಮು ಮತ್ತು ಕಾಶ್ಮೀರ ತಂಡ, ಖಮ್ರಾನ್ ಇಕ್ಬಾಲ್ (133*) ಅವರೆ ಅಜೇಯ ಶತಕದ ಬಲದಿಂದ 43.3 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ದೆಹಲಿ ಬೌಲರ್‌ಗಳ ರಣತಂತ್ರವನ್ನು ಯಶಸ್ವಿಯಾಗಿ ಮೆಟ್ಟಿ ನಿಂತ ಖಮ್ರಾನ್, ತಮ್ಮ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಆ ಮೂಲಕ ತಾವು ಅದ್ಭುತ ಪ್ರತಿಭೆ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಬೆನ್ನಲ್ಲೇ ಪಾಪಿ ಪಾಕಿಸ್ತಾನದಲ್ಲೂ ಭೀಕರ ಸ್ಫೋಟ | 12 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!



















