ಚಿಕ್ಕಬಳ್ಳಾಪುರ : ನೈತಿಕತೆ ಎನ್ನುವುದು ಇದ್ದರೆ ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆಕೊಡಬೇಕು ಎಂದು ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರದೀಪ್ ಈಶ್ವರ್ ಕೇಂದ್ರದಲ್ಲಿ ಬಿಜೆಪಿ,ಇಂಟಲಿಜೆನ್ಸ್ ಫೈಲ್ ಆಗಿದೆ. ಪ್ರಧಾನಿ, ರಾಷ್ಟ್ರಪತಿ ಓಡಾಡುವ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ ಅಂದರೆ ಅದು ಕೇಂದ್ರ ವೈಫಲ್ಯ ಆಗಿದೆ. ಅಲೆಲ್ಲೋ ಜೈಲಲ್ಲಿ ಪೋನ್ ಎತ್ತುಕೊಂಡರೆ ಕಾಂಗ್ರೆಸ್ ವೈಫಲ್ಯವಂತೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆದ್ರೆ ಬಿಜೆಪಿಯವರು ಅಮಾಯಕರಂತೆ ಎಂದು ಹೇಳಿದ್ದಾರೆ.
ಇದು ಇಂಟರ್ನಲ್ ಸೆಕ್ಯೂರಿಟಿಗೆ ದೊಡ್ಡ ಹೊಡೆತ ಹಾಗಾಗಿ ಪ್ರಧಾನಿಗಳು ಗೃಹಮಂತ್ರಿಗಳು ರಾಜಿನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಆಸ್ತಿಗಾಗಿ ತಾಯಿಯನ್ನೇ ಕೊಲೆಗೈದ ಪಾಪಿ ಮಗಳು



















