ಹೈದರಾಬಾದ್ : ಪ್ರತಿಷ್ಠಿತ ISSF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಶೂಟರ್ ಸಾಮ್ರಾಟ್ ರಾಣಾ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆಗಿದ್ದಾರೆ. ಇದರೊಂದಿಗೆ, ಒಲಿಂಪಿಕ್ ಈವೆಂಟ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಪಿಸ್ತೂಲ್ ಶೂಟರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಸೋಮವಾರ ನಡೆದ ರೋಚಕ ಫೈನಲ್‌ನಲ್ಲಿ, 20 ವರ್ಷದ ಸಾಮ್ರಾಟ್ 243.7 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ಚಿನದ್ದ ಪದಕ ಗೆದ್ದ ಬಳಿಕ ಮಾತನಾಡಿದ ಸಾಮ್ರಾಟ್ ರಾಣಾ, “ಈ ಟೂರ್ನಮೆಂಟ್ ಗೆದ್ದಿದ್ದನ್ನು ನಾನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಕೈರೋ ನನಗೆ ಯಾವಾಗಲೂ ವಿಶೇಷ ಸ್ಥಳವಾಗಿದೆ. 2022 ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾನು ಎರಡು ಪದಕಗಳನ್ನು ಗೆದ್ದಿದ್ದೇನೆ. ನನಗೆ ಇಲ್ಲಿಯ ವಾತಾವರಣ ತುಂಬಾ ಇಷ್ಟವಾಯಿತು ಮತ್ತು ಕೊನೆಯವರೆಗೂ ಪ್ರತಿ ಶಾಟ್‌ನಲ್ಲಿ ನನ್ನ ತಂತ್ರದ ಮೇಲೆ ಕೇಂದ್ರೀಕರಿಸುವ ಮೂಲಕ ನಾನು ಇದನ್ನು ಸಾಧಿಸಲು ಸಾಧ್ಯವಾಯಿತು” ಎಂದು ಹೇಳಿದರು.
ಇದನ್ನೂ ಓದಿ : ನೈತಿಕತೆ ಇದ್ರೆ ಮೋದಿ, ಅಮಿತ್ ಶಾ ರಾಜೀನಾಮೆ ಕೊಡ್ಬೇಕು | ದಿಲ್ಲಿ ಸ್ಪೋಟಕ್ಕೆ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ



















