ಚಿತ್ರದುರ್ಗ : ಚಿತ್ರದುರ್ಗದ ಹಳೇ ಕಲ್ಲಹಳ್ಳಿ ರಾಧ್ಯಾ ಢಾಬಾದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದದ್ದನ್ನು ಶಂಕಿಸಿದ ಗ್ರಾಮಸ್ಥರು ಢಾಬಾಗೆ ನುಗ್ಗಿ ಅಕ್ರಮ ಮಾಲು ಸಮೇತ ಹಿಡಿದಿದ್ದಾರೆ.
ಬೀಯರ್, ರಮ್, ವಿಸ್ಕಿ ರಾಶಿ ರಾಶಿ ಬಾಟಲ್ ವಶ ಪಡೆದು, ಡಾಭಾ ಮಾಲೀಕನ ವಿರುದ್ದ ಗ್ರಾಮಸ್ಥರು ಆಕ್ರೋಶಿಸಿದ್ದಾರೆ. ಕೆಳಗಳಹಟ್ಟಿ ಜಗದೀಶ್ ಎಂಬವರ ಒಡೆತನದ ಢಾಬಾ ಇದಾಗಿತ್ತು. ಲಿಂಗಾವರಹಟ್ಟಿ ಲೋಕೇಶ್ ಇದನ್ನೂ ಲೀಸ್‌ಗೆ ಪಡೆದಿದ್ದರು. ಗ್ರಾಮಸ್ಥರು ಒಳನುಗ್ಗುತ್ತಿದ್ದಂತೆ ಅಲ್ಲಿದ್ದ ಕೆಳಗಳಹಟ್ಟಿ ಹನುಮಂತ ಕಾಲೆತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕುಡಿದು ಹಾಳಾಗುತ್ತಿದ್ದಾರೆ ಎಂದು ಆಕ್ರೋಶಿಸುತ್ತಿದ್ದಾರೆ.
ದುಡಿದ ಹಣ ಸಾರಾಯಿ ಕುಡುದ್ರೆ, ಜೀವನ ನಡೆಸೋದು ಹೇಗೆ ಎಂದು ಸ್ಥಳೀಯರು ಪ್ರಶ್ನೆ ಮಾಡಿ ಕೂಡಲೇ ಮದ್ಯ ಮಾರಾಟ ನಿಲ್ಲಿಸಿ ಗ್ರಾಮ ಉಳಿಸಿ ಅಂತಾ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ದಿಲ್ಲಿ ಸ್ಫೋಟ : ಶಂಕಿತನ ಫೋಟೋ ಬಹಿರಂಗ, ಕೆಂಪುಕೋಟೆ ಬಳಿ 3 ಗಂಟೆ ಕಾರು ನಿಲ್ಲಿಸಿದ್ದ ಉಗ್ರ!



















