ಬೆಂಗಳೂರು : ಜಿಬಿಎ ಟಿವಿಸಿಸಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಚೇರಿ ಮೇಲೆ ಲೋಕಾ ದಾಳಿ ಟಿವಿಸಿಸಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕಳಪೆ ಕಾಮಗಾರಿ ಹಾಗೂ ಕಾಮಗಾರಿ ನಡೆಸದೇ ಬಿಲ್ ಗೆ ಅನುಮೋದನೆ ನೀಡಿರುವ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದೆ.
ಒಟ್ಟು 126 ಕಾಮಗಾರಿಗಳಲ್ಲಿ ಅವ್ಯವಹಾರ ಆಗಿರುವ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಜಿಬಿಎ ಜೊತೆಗೆ ಇದರ ವ್ಯಾಪ್ತಿಯ ಮೂರು ನಗರ ಪಾಲಿಕೆಗಳ ಮೇಲೂ ಲೋಕಾ ದಾಳಿ ನಡೆಸಿದೆ. ಉತ್ತರ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಒಳಪಡಲಿರುವ ಆರ್ ಆರ್ ನಗರ ಕ್ಷೇತ್ರದಲ್ಲೂ ದಾಳಿ ನಡೆದಿದೆ.
ಇದೇ ವೇಳೆ ಏಳು ಕಡೆಗಳಲ್ಲಿ ಪಾಲಿಕೆ ಇಂಜಿನಿಯರ್ ಗಳ ಮನೆ ಮೇಲೂ ಲೋಕಾ ರೇಡ್ ಮಾಡಿದೆ.ಲೋಕಾಯುಕ್ತ ಇನ್ಸ್ ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ದಾಳಿ ನಡೆದಿದೆ.ಐದು ಅಧಿಕಾರಿಗಳ ತಂಡ ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸಿದೆ.126 ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : 10 ವರ್ಷದಲ್ಲಿ 50 ಲಕ್ಷ ರೂ. ಗಳಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಲೆಕ್ಕಾಚಾರ



















