ದಾವಣಗೆರೆ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 25.93 ಲಕ್ಷ ವಂಚನೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಗೆ ಮ್ಯಾಟ್ರಿಮೋನಿ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯೋರ್ವ ಆಕೆಯ ಸಹೋದರನಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ತನ್ನ ಸಹೋದರನಿಗೆ ಕೆಲಸ ಸಿಗುತ್ತದೆ ಎಂದು ವಂಚಕನನ್ನು ನಂಬಿದ ಮಹಿಳೆ 25.93 ಲಕ್ಷ ಹಣವನ್ನು ಮೋಸ ಹೋಗಿದ್ದಾರೆ.
ಮಂಡ್ಯ ಜಿಲ್ಲೆಯ ಮಧು ಎಂಬಾತ ವಂಚನೆ ಮಾಡಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ”ವಂಚಕ ಮಧು ಮ್ಯಾಟ್ರಿಮೋನಿ ಜಾಲತಾಣದ ಮೂಲಕ ತನಗೆ ಪರಿಚಿತನಾಗಿದ್ದ. ನನ್ನ ಸಹೋದರನಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಮಧು ನಂಬಿಸಿದ್ದ. ಆಗ ನಾನು ಸೆ.14 ರಿಂದ ಅ.30ರ ವರೆಗೆ ನೂರಕ್ಕೂ ಹೆಚ್ಚು ಬಾರಿ ವಂಚಕನಿಗೆ ಹಣ ವರ್ಗಾವಣೆ ಮಾಡಿದ್ದೇನೆ” ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸಿಇಎನ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅಮೆರಿಕನ್ನರಿಗೆ 2 ಸಾವಿರ ಡಾಲರ್ ಟ್ಯಾರಿಫ್ ಡಿವಿಡೆಂಡ್ | ಟ್ರಂಪ್ ಘೋಷಣೆ



















