ಉಡುಪಿ : ಊಟ ಮಾಡುವಾಗ ಕೈ ತಾಕಿದ್ದಕ್ಕೆ, ಪಬ್ ಮುಂದೆ ಯುವಕರು ಕೈ-ಕೈ ಮಿಲಾಯಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಈಶ್ವರನಗರದ ಬಳಿ ಇರುವ ಡೌನ್ ಟೌನ್ ಬಾರ್ & ರೆಸ್ಟೋರೆಂಟ್‌ನಲ್ಲಿ ಕಳೆದ ಶನಿವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿತ್ತು.
ಪೊಲೀಸ್ ವರದಿ ಪ್ರಕಾರ, ಚಂದನ್, ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್ ಹಾಗೂ ನಿನಾದ್ ಅಜಯ್ ಎಂಬ ಯುವಕರು ಬಾರ್ ನಲ್ಲಿ ಊಟ ಮಾಡುತ್ತಿರುವಾಗ, ಚಂದನ್ ನ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದ ಕಾರಣಕ್ಕೆ ಅವರ ಮಧ್ಯೆ ವಾಗ್ವಾದ ಉಂಟಾಗಿ, ನಂತರ ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ರಕ್ತ ಬರುವಂತೆ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿತ್ತು. ಇದೀಗ ಮಣಿಪಾಲ ಪೊಲೀಸರು ಚಂದನ್, ಅಮರ್ ಶೆಟ್ಟಿ, ಧನುಷ್,ಅಜಯ್ ಎಂಬುವವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಯುರೋಪ್ ವರ, ಫ್ರಾನ್ಸ್‌ನ ವಧು ; ಕೊಲ್ಲೂರಿನಲ್ಲಿ ನೆರೆವೇರಿತು ಕೃಷ್ಣ ಭಕ್ತರ ಮದುವೆ



















