ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಪ್ರತಿ ಪ್ರಜೆಗೆ 2 ಸಾವಿರ ಡಾಲರ್ (1.77 ಲಕ್ಷ ರೂ.) ಟ್ಯಾರಿಫ್ ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಪ್ರತಿ ವ್ಯಕ್ತಿಗೆ 2,000 ಡಾಲರ್ ಟ್ಯಾರಿಫ್ ಡಿವಿಡೆಂಡ್ ಕೊಡುವುದಾಗಿ ತಮ್ಮ ಟ್ರೂತ್ ಸೋಷಿಯಲ್ನ ಪೋಸ್ಟ್ವೊಂದರಲ್ಲಿ ಟ್ರಂಪ್ ತಿಳಿಸಿದ್ಧಾರೆ. ಈ ಮೂಲಕ ಟ್ರಂಪ್ ಅವರು ತಮ್ಮ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕನ್ನರಿಗೆ ಟ್ಯಾರಿಫ್ ಲಾಭಾಂಶ ಕೊಡುವ ತಮ್ಮ ಪ್ಲಾನ್ ಅನ್ನು ಟೀಕಿಸುವವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೆ ಡಿವಿಡೆಂಡ್ ಪೇಔಟ್ ನೀಡಲಾಗುವುದು ಎಂದು ಈ ಹಿಂದೆಯೂ ಹೇಳಿದ್ದಿದೆ. ಇದೀಗ ಅವರು ಪ್ರತಿ ವ್ಯಕ್ತಿಗೂ 2,000 ಡಾಲರ್ ಡಿವಿಡೆಂಡ್ ಸಿಗುತ್ತೆ ಎಂದಿದ್ದಾರೆ. ಆದರೆ, ಅಧಿಕ ಆದಾಯ ಇರುವ ವರ್ಗದವರನ್ನು ಬಿಟ್ಟು ಇತರರಿಗೆ ಇದು ಸಿಗಬಹುದು. ಆದರೆ, ಯಾವ ಮಟ್ಟದ ಆದಾಯವನ್ನು ಮಾನದಂಡವಾಗಿ ಇಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಯಾವ ಜನರಿಗೆ ಡಿವಿಡೆಂಡ್ ನೀಡುವುದು, ಹೇಗೆ ನೀಡುವುದು ಎಂಬುದು ನಿರ್ಧಾರವಾಗಿಲ್ಲ. ವರದಿಗಳ ಪ್ರಕಾರ ಕ್ಯಾಷ್ ರೂಪದಲ್ಲಿ ಇವುಗಳನ್ನು ನೀಡುವ ಸಾಧ್ಯತೆ ಇಲ್ಲ. ಅಂದರೆ ಭಾರತದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ಇರುವ ರೀತಿಯಲ್ಲಿ ಕ್ಯಾಷ್ ಪೇಔಟ್ ಅನ್ನು ಅಮೆರಿಕದಲ್ಲಿ ನೀಡುವ ಸಾಧ್ಯತೆ ಇಲ್ಲದೇ ಇರಬಹುದು. ಕೆಳ ಆದಾಯ ಗುಂಪಿನ ಜನರಿಗೆ ಟ್ಯಾಕ್ಸ್ ರಿಯಾಯಿತಿಗಳನ್ನು ನೀಡುವುದು ಇತ್ಯಾದಿ ಕ್ರಮಗಳ ಮೂಲಕ ಪರೋಕ್ಷವಾಗಿ ಜನರಿಗೆ ಲಾಭ ತರುವಂತೆ ಮಾಡಬಹುದು. ಟ್ಯಾಕ್ಸ್ ಬಿಲ್ನಲ್ಲಿ ಸಾಕಷ್ಟು ಡಿಡಕ್ಷನ್ಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ : ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು | ಆಸ್ಪತ್ರೆಗೆ ದಾಖಲು



















