ಕಾಲಿವುಡ್‌ನ ಜನಪ್ರಿಯ ನಟ, ಬಹುಭಾಷಾ ಕಲಾವಿದ ಅಭಿನಯ್ ಇಂದು ನಿಧನ ಹೊಂದಿದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಅವರು ಕೆಲವು ದಿನಗಳಿಂದ ಲಿವರ್‌ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿಧನ ಹೊಂದಿದ್ದಾರೆ.
ಲಿವರ್‌ಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ವಿಡಿಯೊ ಮೂಲಕ ಮನವಿ ಮಾಡಿದ್ದರು. ಸದ್ಯ ಮೃತದೇಹವನ್ನು ಅವರ ಚೆನ್ನೈ ನಿವಾಸದಲ್ಲಿ ಇರಿಸಲಾಗಿದೆ.
ಈ ಹಿಂದೆ ಅಭಿನಯ್ ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ವಿಚಾರವನ್ನು ವಿಡಿಯೊ ಮೂಲಕ ಬಹಿರಂಗಪಡಿಸಿದ್ದರು. ಈ ಬಗ್ಗೆ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ ಎಂದೂ ತಿಳಿಸಿದ್ದರು. “ನಾನು ಹೆಚ್ಚು ಕಾಲ ಇರುತ್ತೇನೆಯೋ ಇಲ್ಲವೋ ತಿಳಿದಿಲ್ಲ. ವೈದ್ಯರು ಇನ್ನೂ ಒಂದೂವರೆ ವರ್ಷ ಮಾತ್ರ ಬದುಕಬಹುದು ಎಂದಿದ್ದಾರೆʼʼ ಎಂದು ಹೇಳಿದ್ದರು. ಈ ವಿಡಿಯೊ ವೈರಲ್ ಆಗಿತ್ತು. ಅಭಿಮಾನಿಗಳು ಅಭಿನಯ್ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದರು.
ಇದನ್ನೂ ಓದಿ : ಉಡುಪಿ | ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ ; ಐವರು ಆರೋಪಿಗಳು ಅರೆಸ್ಟ್..!



















