ಬೆಂಗಳೂರು : ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಮಹಾನಟಿ ಸೀಸನ್-2 ಯಶಸ್ವಿಯಾಗಿ ನೆರವೇರಿದೆ. ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರು ಮೀನು ವಂಶಿ ರತ್ನಾಕುಮಾರ್ ಗೆದ್ದು ಕಪ್ ಎತ್ತಿದ್ದಾರೆ.

ಪ್ರತಿಯೊಬ್ಬ ಹೆಣ್ಣಿಗೂ ಕಲಾ ಪ್ರಪಂಚದ ಬಾಗಿಲು ಬಡಿಯಬೇಕು ಎಂಬ ಮಹದಾಸೆ ಇರುತ್ತೆ. ಬಟ್, ಕೆಲವರಿಗೆ ಮಾತ್ರ ಆ ಅದೃಷ್ಟ ಅವಕಾಶವನ್ನ ತೆರೆದಿಡುತ್ತದೆ. ಮಹಾನಟಿ ಸೀಸನ್-2 ವಿನ್ನರ್ ವಂಶಿಗೂ ಈಗ ಶುಕ್ರದೆಸೆ ಶುರುವಾಗಿದೆ. ನಟನೆ ಎಂಬ ಸಮುದ್ರಕ್ಕೆ ಸ್ವಂತ ಪರಿಶ್ರಮದಿಂದಲೇ ವಂಶಿಗೆ ಎಂಟ್ರಿ ಸಿಕ್ಕಿದೆ.

ಮಹಾನಟಿ ಸೀಸನ್-2ನಲ್ಲಿ ಸ್ಪರ್ಧೆಯ ಬಿಸಿ ಜೋರಾಗೆ ಇತ್ತು. ಟಾಪ್ ಫೈನಲಿಸ್ಟ್ ಗಳ ಪೈಕಿ ವಂಶಿ ಕಪ್ ಗೆದ್ದಿದ್ದಾರೆ. ಜಡ್ಜ್ ಗಳಾದ ರಮೇಶ್ ಅರವಿಂದ್ ವಿನ್ನರ್ ಯಾರು ಅಂತ ಕೈಯೆತ್ತಿ ಅನೌನ್ಸ್ ಮಾಡಿದ್ರು. ಬೆಳಗಾವಿಯ ವರ್ಷ ರನ್ನರ್ ಅಪ್ ಆದ್ರು. ವಂಶಿಯ ಇಷ್ಟುದಿನಗಳ ಪರ್ಫಮೆನ್ಸ್ ಹಾಗೂ ಡೆಡಿಕೇಶನ್ ಗೆಲುವಿನ ಮೂಲಕ ಸಾರ್ಥಕವಾಯ್ತು.

ವಂಶಿಗೆ ಬಿ.ಸರೋಜದೇವಿ ಪ್ರೇರಣೆಯಂತೆ. ಅವರನ್ನೇ ನೋಡಿ ಕಲಿತ ವಂಶಿಗೆ ಇನ್ನಷ್ಟು ಒಳ್ಳೊಳ್ಳೆ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂಬ ಕನಸಿದೆ. ಸ್ಯಾಂಡಲ್‌ವುಡ್‌ನಲ್ಲಿ ವಂಶಿಗೆ ಅವಕಾಶಗಳ ಸುರಿಮಳೆಯಾದ್ರು ಆಶ್ಚರ್ಯವಿಲ್ಲ. ಯುವನಟಿಯರನ್ನ ಚಿತ್ರರಂಗಕ್ಕೆ ಪರಿಚಯಿಸುವ ವಿನೂತನ ಪ್ರಯತ್ನ ಮಹಾನಟಿ ಕಾರ್ಯಕ್ರಮಕ್ಕೆ ವಂಶಿ ಮನಸಾರೆ ಥ್ಯಾಂಕ್ಸ್ ಹೇಳಿದ್ದಾರೆ.
ಇದನ್ನೂ ಓದಿ : ತಿರುಪತಿ ಲಡ್ಡು ವಿವಾದ | ಡೈರಿಗೆ ನಕಲಿ ತುಪ್ಪ ತಯಾರಿಸುವ ರಾಸಾಯನಿಕ ಪೂರೈಸುತ್ತಿದ್ದ ವ್ಯಾಪಾರಿ ಬಂಧನ



















