‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯವಾದ ರಜಿನಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಇತ್ತೀಚಿಗೆ ರೀಲ್ಸ್ ಮೂಲಕ ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಅರುಣ್, ರಜನಿಗೆ ಮಮ್ಮಿ, ಮಮ್ಮಿ ಎನ್ನುತ್ತಲೇ ಸಖತ್ ಫೇಮಸ್ ಆಗಿದ್ದರು.
ರಜಿನಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೆಲಸ ಮಾಡಿದ್ದಾರೆ. ‘ಅಮೃತವರ್ಷಿಣಿ’ ಅವರ ವೃತ್ತಿಜೀವನದಲ್ಲಿ ವಿಶೇಷ ಧಾರಾವಾಹಿ ಆಗಿ ಉಳಿದುಕೊಂಡಿದೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಬಳಿಕ ರಿಯಾಲಿಟಿ ಶೋಗಳಲ್ಲೂ ಕಾಣಿಸಿದರು. ಕೆಲವು ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಅವರು ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಈಗ ಅವರು ಹೊಸ ಬಾಳು ಆರಂಭಿಸಿದ್ದಾರೆ.
ರಜಿನಿ ಅರುಣ್ ವೆಂಕಟೇಶ್ ಹೆಸರಿನ ಜಿಮ್ ಟ್ರೇನರ್ ಜೊತೆ ವಿಡಿಯೋ ಮಾಡುತ್ತಿದ್ದಾಗ ಪ್ರಶ್ನೆ ಮಾಡಿದರೆ‘ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್. ಬೆಸ್ಟ್ ಫ್ರೆಂಡ್ನ ಮದುವೆ ಆದರೂ ತಪ್ಪೇನು ಇಲ್ವಲ್ಲ’ ಎಂದಿದ್ದರು ರಜಿನಿ. ಇಂದು ರಜಿನಿ ಹಾಗೂ ಅರುಣ್ ವಿವಾಹ ನೆರವೇರಿದೆ. ಕೇವಲ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಈ ಮದುವೆ ಶಾಸ್ತ್ರ ನಡೆದಿದೆ. ದಂಪತಿಗೆ ಎಲ್ಲರೂ ಶುಭ ಕೊರುತ್ತಿದ್ದಾರೆ.
ಇದನ್ನೂ ಓದಿ : ಉಡುಪಿ | ಪಡುಬಿದ್ರಿಯಲ್ಲಿ ವಿಮಾನ ನಿಲ್ದಾಣದ ಕುರಿತು ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ,ಪ್ರಧಾನಿಗೂ ಮನವಿ ಸಾಧ್ಯತೆ!



















