ಚಿಕ್ಕಬಳ್ಳಾಪುರ : ಚಿಂತಾಮಣಿಯ ಕಟಮಾಚನಹಳ್ಳಿ ಗ್ರಾಮದಲ್ಲಿ ಯುವತಿಗೆ ಪೀಡಿಸುತ್ತಿದ್ದಾನೆಂದು ಕುಟುಂಬಸ್ಥರು ಪ್ರಿಯಕರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಲ್ಲಗುಟ್ಟಹಳ್ಳಿ ಗ್ರಾಮದ ಆನಂದ್ ಎಂಬುವವನಿಗೆ ಕುಟುಂಬಸ್ಥರು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಇತನು ಶ್ರಾವಣಿ ಎಂಬುವಳೊಂದಿಗೆ ಲಿವಿಂಗ್ ಟುಗೆದರ್ನಲ್ಲಿದ್ದನು. ಬಳಿಕ ಇಕೆ ಆನಂದ್ ಜೊತೆ ಬ್ರೇಕಪ್ ಮಾಡಿಕೊಂಡು ಬೇರೆ ವಿವಾಹವಾಗಿದ್ದಳು. ಇದರಿಂದ ಕೋಪಗೊಂಡ ಆನಂದ್ ವಿವಾಹದ ಬಳಿಕವೂ ಶ್ರಾವಣಿ ಹಿಂದೆ ಬಿದ್ದು ಆನಂದ್ ಪೀಡಿಸುತ್ತಿದ್ದ.
ಅಲ್ಲದೇ, ಶ್ರಾವಣಿ ಜೊತೆ ತೆಗೆದ ಫೋಟೋ ಊರೆಲ್ಲಾ ಹರಿದಾಡುವಂತೆ ಮಾಡಿದ್ದನು. ಕಟಮಾಚನಹಳ್ಳಿ ಗ್ರಾಮದ ಬಳಿ ಸಿಕ್ಕಿಬಿದ್ದ ಆನಂದ್ಗೆ ಕುಟುಂಬಸ್ಥರು ಥಳಿಸಿದ್ದಾರೆ.ಈ ಪ್ರಕರಣ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೊಡಗು | ರೈತನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ; ಬೆಳೆಗಳನ್ನೇ ನಾಶಮಾಡಿದ ಸಿಬ್ಬಂದಿ



















