ಉಡುಪಿ: ಕೋಟ ವಿದ್ಯಾ ಸಂಘ (ರಿ.) ಕೋಟ ಇವರ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ಶಿಕ್ಷಣ ಸಂಸ್ಥೆಗಳ 2025ರ ವಾರ್ಷಿಕ ಕ್ರೀಡಾಕೂಟವು (Annual Sports Meet 2025) ವಿಜೃಂಭಣೆಯಿಂದ ನಡೆಯಿತು.
ಭಾರತೀಯ ವಾಯುಪಡೆಯಲ್ಲಿ ಆಡಳಿತಾತ್ಮಕ ಸಹಾಯಕ ಅಧಿಕಾರಿಯಾಗಿ ಗುಜರಾತಿನ ಜಾಮ್‌ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಹೆಮ್ಮೆಯ ಹಿಂದಿನ ವಿದ್ಯಾರ್ಥಿ ಶ್ರೀ ಎಸ್.ಜಿ.ಟಿ. ಶ್ರೀಕಾಂತ್ ಮಧ್ಯಸ್ಥ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡುತ್ತಾ”ಕ್ರೀಡೆಯು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯಿಂದ ಕಲಿಯುವ ಶಿಸ್ತು, ಸಂಯಮ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಮಿಲಿಟರಿ ಸೇವೆ ಸೇರಿದಂತೆ ಯಾವುದೇ ಉನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಕ್ರೀಡೆಯಲ್ಲಿ ಸಕ್ರಿಯರಾಗಿದ್ದರಿಂದಲೇ ನಾನು ಭಾರತೀಯ ಮಿಲಿಟರಿ ವೃತ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ.
ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕೆ.ಜಗದೀಶ ನಾವಡ ಮಾತನಾಡಿ, ಪ್ರಸ್ತುತ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆಯಿಂದ ಉದ್ಘಾಟನೆಗೊಂಡಿದೆ ಹಾಗೆ ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಹಾಗೆ ಸರಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಇದ್ದಾರೆ, ಜೀವನದಲ್ಲಿ ಹಲವು ಸಾಧನೆಗಳನ್ನು ಮಾಡಿರುತ್ತಾರೆ ಹಾಗೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ
ಇನ್ನು, ಸಂಸ್ಥೆ ವತಿಯಿಂದ ಶ್ರೀಕಾಂತ್ ಮಧ್ಯಸ್ಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೋಟ ವಿದ್ಯಾ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಪಿ. ಮಂಜುನಾಥ ಉಪಾಧ್ಯ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೀತಿ ರೇಖಾ, ಬಾಲಕರ ಪ್ರೌಢಶಾಲೆಯ ಹಿರಿಯ ಸಹಾಯಕ ಶಿಕ್ಷಕರಾದ ಶ್ರೀ ಪ್ರೇಮಾನಂದ , ವಿವೇಕ ಬಾಲಕಿಯರ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಶ್ರೀ ನರೇಂದ್ರ ಕುಮಾರ್ ಕೋಟ ಮತ್ತು ಹಿಂದಿನ ವಿದ್ಯಾರ್ಥಿ, ಶ್ರೀಕಾಂತ ಮಧ್ಯಸ್ಥರ ತಂದೆ ಶ್ರೀ ಪ್ರಕಾಶ ಮಧ್ಯಸ್ಥ ಉಪಸ್ಥಿತರಿದ್ದರು.
ಕ್ರೀಡೋತ್ಸವವು ವಿವೇಕ ಸಂಸ್ಥೆಯ ವಿದ್ಯಾರ್ಥಿಗಳ ಎನ್‌ಸಿಸಿ ಪರೇಡ್ ಮತ್ತು ಬ್ಯಾಂಡ್‌ನೊಂದಿಗೆ ಭವ್ಯವಾದ ಪಥಸಂಚಲನದೊಂದಿಗೆ ಆರಂಭಗೊಂಡಿತು.ಅವರೊಂದಿಗೆ ಸಂಸ್ಥೆಯ ಸುಮಾರು 2,500 ವಿದ್ಯಾರ್ಥಿಗಳು ವಿವಿಧ ಬ್ಯಾಚ್ ಗಳಲ್ಲಿ ಬಣ್ಣ ಬಣ್ಣದ ಬಾವುಟವನ್ನು ಹಿಡಿದು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಸಂಸ್ಥೆಯ ಸುಮಾರು 110 ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡು ಮೆರುಗನ್ನು ಹೆಚ್ಚಿಸಿದರು.
ನಂತರ ಶ್ರೀ ಮಂಜುನಾಥ ಉಪಾಧ್ಯ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಚಂದ್ರಶೇಖರ್ ಎಚ್.ಎಸ್., ನರೇಂದ್ರ ಕುಮಾರ್, ಶಿವಪ್ರಸಾದ್ ಶೆಟ್ಟಿಗಾರ್ ಹಾಗೂ ಮಹಾಲಕ್ಷ್ಮಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಕೂಟದ ಜವಾಬ್ದಾರಿಯನ್ನು ದೈಹಿಕ ಶಿಕ್ಷಕರಾದ ಶ್ರೀಮತಿ ಮಮತಾ, ಶ್ರೀ ಗಣೇಶ್ ಶೆಟ್ಟಿ, ಶ್ರೀ ವಿಶ್ವನಾಥ್ ನಾಯಕ್ ಹಾಗೂ ಶ್ರೀ ರಕ್ಷತ್ ಅವರು ಯಶಸ್ವಿಯಾಗಿ ನಿಭಾಯಿಸಿದರು. ನಂತರ ಎರಡು ದಿನಗಳ ಕಾಲ ಸತತವಾಗಿ ಕ್ರೀಡಾಕೂಟ ಮುಂದುವರಿಯಿತು.
ಇದನ್ನೂ ಓದಿ: ಉಡುಪಿ | ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಗಿಯದ ಕಾಮಗಾರಿಗಳು ; ಹೈರಣಾದ ಜನ ಜೀವನ



















