ಬಳ್ಳಾರಿ: ಇಂದು ಕೆ-ಸೆಟ್ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಹಾಕಿಕೊಂಡಿರುವ ದೇವರ ದಾರವನ್ನು ಸಹ ಬಿಚ್ಚಿಸಿ ಅಭ್ಯರ್ಥಿಗಳನ್ನು ಒಳಗೆ ಕಳುಹಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಕಿವಿಯೋಲೆ, ಮೂಗುತಿ ಹಾಗೂ ದೇವರ ದಾರ ಬಿಚ್ಚಿಸಿದ್ದಕ್ಕೆ ಕೆಲ ಪರೀಕ್ಷಾರ್ಥಿಗಳು ಅಸಮಾಧಾನದ ನಡುವೆಯೂ ಅನಿವಾರ್ಯವಾಗಿ ಪರೀಕ್ಷೆ ಮುಗಿಸಿಕೊಂಡು ಹೊರಬಂದ ಬಳಿಕ ಪ್ರತಿಕ್ರಿಯೆ ನೀಡಿದ ಪರೀಕ್ಷಾರ್ಥಿಗಳು ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
ಕಿವಿಯೋಲೆ, ಮೂಗುತಿ ಬಿಚ್ಚಿಸಿದ್ದು ನಮ್ಮ ಮನಸ್ಸಿಗೆ ಬೇಜಾರಾಗಿದೆ. ನಮಗೆ ಮಾಂಗಲ್ಯ, ಕಾಲುಂಗುರ ಹೇಗೋ, ಹಾಗೇ ಮೂಗುತಿಯೂ ಬಹಳ ಮುಖ್ಯ. ಆದರು ನಿಯಮ ಪಾಲನೆ ಮಾಡಬೇಕು ಎನ್ನುವ ಕಾರಣಕ್ಕೆ ಅನಿವಾರ್ಯವಾಗಿ ಬಿಚ್ಚಿಟ್ಟು ಹೋಗಿದ್ದೇವೆ ಎಂದಿದ್ದಾರೆ.
ಬಳ್ಳಾರಿಯಲ್ಲಿ 20 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೆ-ಸೆಟ್ ಪರೀಕ್ಷೆಗಳು ನಡೆಸಲಾಯಿತು. ಪರೀಕ್ಷಾ ಕೇಂದ್ರಗಳ ಸುತ್ತಲೂ ಇರುವ ಜೆರಾಕ್ಸ್ ಸೆಂಟರ್ ಮತ್ತು ಇಂಟರ್ ನೆಟ್ ಸೆಂಟರ್‌ಗಳನ್ನು ಕಾರ್ಯನಿರ್ವಹಿಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ: ಪಿಜಿ ಮೆಡಿಕಲ್ ಸೀಟ್ 85% ರಷ್ಟು ಸ್ಥಳೀಯರಿಗೇ ಮೀಸಲು : ತೆಲಂಗಾಣ ಸರ್ಕಾರ ನಿರ್ಧಾರ



















