ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್, ತನ್ನ ಪುತ್ರ ವಿನೀಶ್ ಬರ್ತಡೇ ಆಚರಿಸಲಾಗುತ್ತಿಲ್ಲವೆಂದು ಚಿಂತೆಗೀಡಾಗಿದ್ದಾರೆ. ಈ ಮಧ್ಯೆ ನಟ ದರ್ಶನ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ದರ್ಶನ್ ಪವಿತ್ರಗೌಡ ಫೋಟೋಸ್ ಎಲ್ಲೆಡೆ ಬಿರುಗಾಳಿಯನ್ನೇ ಎಬ್ಬಿಸಿದೆ.

ಹೌದು.. ಒಂದು ಕಾಲದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ವಾಸವಿದ್ದರು. ಇವರು ವಿವಾಹ ಆಗಿದ್ದರೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಆದರೆ, ಇದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಈಗ ಇವರ ಹೊಸ ಫೋಟೋಸ್‌ಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಇವರು ಸತಿ-ಪತಿ ರೀತಿ ಕಾಣಿಸಿಕೊಂಡಿದ್ದಾರೆ.

ಆ ಸಂದರ್ಭದ ಫೋಟೋಗಳು ಈಗ ವೈರಲ್ ಆಗಿ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದ್ದು, ದರ್ಶನ್ ಪವಿತ್ರ ಮ್ಯಾರೇಜ್ ಫೋಟೋಸ್ ಅಂತ ಒಂದು ರೀಲ್ ವಿಡಿಯೋ ಕೂಡ ವೈರಲ್ ಆಗಿದೆ. ಪವಿತ್ರಾ ಕತ್ತಲ್ಲಿ ಅರಿಷಿಣ ದಾರ ಇದೆ. ಮದುವೆಯ ಉಡುಪಿನಲ್ಲಿ ದರ್ಶನ್ ಹಾಗೂ ಪವಿತ್ರ ಕಾಣಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ತೆಗ್ದಿರೋ ಫೋಟೋಗಳು ಇದಾಗಿದ್ದು, ದರ್ಶನ್ ಅವರಿಗೆ ಈ ವೇಳೆ ಅಪಘಾತವಾಗಿ ಕೈಗೆ ಪೆಟ್ಟಾಗಿತ್ತು.
ಇನ್ನು ಈ ಫೋಟೋ ವೈರಲ್ ಹಿಂದೆ ನಾನ ರೀತಿಯ ಪ್ರಶ್ನೆಗಳು ಹುಟ್ಟಿಕೊಂಡಿದೆ. ದರ್ಶನ್ ಒಳಗಿರುವಾಗ ಫೋಟೋ ವೈರಲ್ ಮಾಡಿದ್ಯಾರು? ದರ್ಶನ್ ಸೆಲ್ಫಿ ಹಿಂದಿನ ಸತ್ಯವೇನು? ಎಂಬಲ್ಲಾ ಗುಸುಗುಸು ಕೇಳಿಬರುತ್ತಿದೆ.
ಇದನ್ನೂ ಓದಿ : ಮಗನ ಬರ್ತಡೇ ಆಚರಿಸಲಾಗದೆ ದಚ್ಚು ಪರದಾಟ


















