ಬೆಂಗಳೂರು : ರಸ್ತೆ ಬದಿ ಕಸ ಎಸೆಯುವವರ ಮನೆ ಮುಂದೆ ಕಸ ಸುರಿಯೋ ಅಭಿಯಾನದಿಂದ ಜಾಗೃತಿ ಮೂಡಿಸಲು ಜಿಬಿಎ ಮುಂದಾಗಿದೆ.
ಈಗಾಗಲೇ ರಸ್ತೆ ಬದಿಯಲ್ಲಿ ಕದ್ದು ಕಸ ಎಸೆದು ಹೋಗುವವರ ವಿಡಿಯೋವನ್ನು ಮಾರ್ಷಲ್ ಗಳು ಚಿತ್ರಿಕರಿಸಿವೆ. ಇಂದು ಅದೇ ವ್ಯಕ್ತಿಗಳ ಮನೆ ಮುಂದೆ ಕಸ ಸುರಿದು ಜಾಗೃತಿ ಮೂಡಿಸಿವೆ.
ಮನೆ ಮುಂದೆ ಕಸದ ಆಟೋ ಬಂದರು ಕಸ ನೀಡದೆ ರಸ್ತೆ ಬದಿಯಲ್ಲಿ ಕಸ ಎಸೆದವರನ್ನು ಟಾರ್ಗೇಟ್ ಮಾಡಿಲಾಗುತ್ತಿದೆ. ಒಟ್ಟು 190 ವಾರ್ಡ್ ಗಳಲ್ಲಿ ಪ್ರತಿ ವಾರ್ಡ್ ಒಂದು ಮನೆಯಂತೆ 190 ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ 1000 ರೂಪಾಯಿ ಯಿಂದ 10 ಸಾವಿರ ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತಿದೆ.
ಇದನ್ನೂ ಓದಿ : ಸ್ನೇಹಿತರ ಜೊತೆ ಸೇರಿ ತಾಯಿಯನ್ನೇ ಹತ್ಯೆಗೈದ ಅಪ್ರಾಪ್ತ ಮಗಳು



















