ಉತ್ತರ ಪ್ರದೇಶ : ಬಹ್ರೈಚ್ ಜಿಲ್ಲೆಯ ಕೌಡಿಯಾಲ ನದಿಯಲ್ಲಿ ದೋಣಿ ಮಗುಚಿ ಬಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಎಂಟು ಮಂದಿ ನಾಪತ್ತೆಯಾಗಿದ್ದಾರೆ.
ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸ್ಥಳೀಯ ಡೈವರ್‌ಗಳನ್ನು ಬಳಸಿಕೊಂಡಿದ್ದಾರೆ. ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.
22 ಜನರನ್ನು ಹೊತ್ತು ಭರತಪುರಕ್ಕೆ ದೋಣಿ ಪ್ರಯಾಣಿಸುತ್ತಿದ್ದಾಗ ಅವಘಡ ಸಂಭವಿಸಿದೆ. ನದಿಯ ಬಲವಾದ ಪ್ರವಾಹದಿಂದಾಗಿ ದೋಣಿ ಪಲ್ಟಿಯಾಗಿದೆ. ಘಟನೆಯಲ್ಲಿ 60 ವರ್ಷದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಐದು ಮಕ್ಕಳು ಸೇರಿದಂತೆ ಎಂಟು ಜನರು ನಾಪತ್ತೆಯಾಗಿದ್ದಾರೆ. ಬಾಕಿ ಜನರು ಈಜಿ ದಡ ಸೇರಿದ್ದಾರೆ.
ಭರ್ತಾಪುರ ಗ್ರಾಮದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ನಿವಾಸಿಗಳು ನದಿ ಪಕ್ಕದ ಲಖಿಂಪುರ ಖೇರಿ ಜಿಲ್ಲೆಯ ಮಾರುಕಟ್ಟೆಗೆ ಹೋಗಿದ್ದರು. ಈ ಗ್ರಾಮವು ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ನದಿಯ ಒಂದು ಬದಿಯಲ್ಲಿರುವ ದ್ವೀಪದಂತಿದೆ. ದೋಣಿಯಲ್ಲಿ ವಾಪಸ್ ಬರುವಾಗ ಘಟನೆ ನಡೆದಿದೆ.
ಇದನ್ನೂ ಓದಿ : ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು!



















