ಉಡುಪಿ : ಭೀಕರ ‘ಮೊಂಥಾ’ ಚಂಡಮಾರುತ ಆಂಧ್ರಪ್ರದೇಶದ ಕಾಕಿನಾಡ ಕರಾವಳಿಗೆ ಮಂಗಳವಾರ ಸಂಜೆ ಅಪ್ಪಳಿಸಿದೆ. ಪರಿಣಾಮ ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಧ್ಯೆ ‘ಮೊಂಥಾ’ ಸೈಕ್ಲೋನ್ ಎಫೆಕ್ಟ್ ಕರ್ನಾಟಕ ಕರಾವಳಿಗೂ ತಟ್ಟಿದ್ದು, ಉಡುಪಿಯ ಕಾಪುವಿನಲ್ಲಿರುವ ಮಟ್ಟು ಬೀಚ್‌ನಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದೆ.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ‘ಮೊಂಥಾ’ ಚಂಡಮಾರುತ ಮತ್ತು ಲಕ್ಷದ್ವೀಪದ ವಾಯುಭಾರ ಕುಸಿತದಿಂದ ಕರ್ನಾಟಕದ ಕರಾವಳಿಯ ಕಡಲನ್ನು ಅಬ್ಬರಿಸುವಂತೆ ಮಾಡಿದೆ. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮೀನುಗಾರಿಕಾ ಚಟುವಟಿಕೆಯನ್ನು ನಿಷೇಧಿಸಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಹವಾಮಾನ ಇಲಾಖೆ ಗಾಳಿ, ಮಳೆ ಮುನ್ಸೂಚನೆ ನೀಡಿದೆ. ಕಾಪು ಮಟ್ಟು ಬೀಚ್ ಸುತ್ತಮುತ್ತ ಕಡಲಕೊರೆತವಾಗಿದ್ದು, ಗಾಳಿಯ ಅಬ್ಬರ ಹೀಗೆ ಮುಂದುವರೆದರೆ ರಸ್ತೆ, ಜನವಸತಿ ಪ್ರದೇಶಕ್ಕೂ ಹಾನಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಂದಿನ ಸಿಎಂ | ಯತ್ನಾಳ್ ಸ್ಫೋಟಕ ಹೇಳಿಕೆ!



















