‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಲಾಗಿದೆ. ನಟಿ ಮೇಘಾ ಶೆಟ್ಟಿ ಹಾಗೂ ನಟ ಕವೀಶ್ ಶೆಟ್ಟಿ ಅಭಿನಯಿಸಿರುವ ಮೂರು ಭಾಷೆಯ ಸಿನಿಮಾ ಇದು. ಕನ್ನಡ ಚಿತ್ರರಂಗ ಮತ್ತು ಮರಾಠಿ ಚಿತ್ರತಂಗದ ಹೆಸರಾಂತ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಆಗಿದೆ. ಸಿನಿಪ್ರಿಯರು ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡ ಪೋಸ್ಟರ್ ಬಿಡುಗಡೆ ಮೂಲಕ ರಿಲೀಸ್ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಸಿನಿಮಾ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿರುವುದು ವಿಶೇಷ.
‘ಆಪರೇಷನ್ ಲಂಡನ್ ಕೆಫೆ’ ಸಿನಿಮಾವನ್ನು ಉಡುಪಿ ಮೂಲದ ‘ಇಂಡಿಯನ್ ಫಿಲ್ಮ್ ಫ್ಯಾಕ್ಟರಿ’, ಮರಾಠಿಯ ‘ದೀಪಕ್ ರಾಣೆ ಫಿಲ್ಮ್ಸ್’ ಮೂಲಕ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಹಾಗೂ ವಿಜಯ್ ಪ್ರಕಾಶ್ ಅವರು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಮಾಸ್ ಮತ್ತು ಮೆಲೋಡಿ ಹಾಡುಗಳು ಜೊತೆಗೆ ಟ್ರೇಲರ್ ಬಿಡುಗಡೆ ಮಾಡಲಿರುವುದಾಗಿ ಚಿತ್ರತಂಡ ತಿಳಿಸಿದೆ.
ನಟ ಕವೀಶ್ ಶೆಟ್ಟಿ ಅವರು ಈ ಮೊದಲು ‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅವರು ಲವರ್ ಕಮ್ ಚಾಕಲೇಟ್ ಬಾಯ್ ಆಗಿ ಗಮನ ಸೆಳೆದಿದ್ದರು. ಈಗ ಅವರು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಮೂಲಕ ಮಾಸ್ ಕಮ್ ಆ್ಯಕ್ಷನ್ ಹೀರೋ ಆಗುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.
ಮೇಘಾ ಶೆಟ್ಟಿ ಅವರ ಗೆಟಪ್ ಗಮನ ಸೆಳೆಯುತ್ತಿದೆ. ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಖಡಕ್ ಲುಕ್ ಮೂಲಕ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡ್ಕೆ ಅವರು ಅಭಿನಯಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಅವರು ಆರ್ಮಿ ಆಫೀಸರ್ ಪಾತ್ರವನ್ನು ಮಾಡಿದ್ದಾರೆ.
ಇದನ್ನೂ ಓದಿ : ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ ಸರ್ಕಾರಿ ವಕೀಲೆ



















