ಬಿಗ್‌ಬಾಸ್ ಕನ್ನಡ 12ರ ಪ್ರಬಲ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಮನೆಯಿಂದ ಹೊರಗಿದ್ದಾಗ ಮಾಡಿದ ತಪ್ಪೊಂದನ್ನು ಅರಿತುಕೊಂಡಿದ್ದಾರೆ. ಅಮ್ಮನ ಪ್ರೀತಿ, ಅವರು ತಯಾರಿಸುವ ಆಹಾರದ ಮಹತ್ವ ತಿಳಿಯದೆ ದೂರುತ್ತಿದ್ದರು. ಈಗ ತಮ್ಮ ನಡೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಅವರು ಸ್ಪರ್ಧಿ ಆಗಿ ಎಂಟ್ರಿ ಕೊಟ್ಟರು. ಬಂದ ದಿನವೇ ಅವರು ಹೊರ ಹೋದರು. ಒಂದು ವಾರದ ಬಳಿಕ ಅವರು ದೊಡ್ಮನೆಗೆ ಮತ್ತೆ ಎಂಟ್ರಿ ಕೊಟ್ಟರು. ಈ ವೇಳೆ ಅವರ ಆಟ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ ಎಂಬ ವಿಚಾರ ತಿಳಿಯಿತು. ಅವರು ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೆ, ಅದನ್ನು ಎಕ್ಸ್ಪ್ರೆಸ್ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ಅವರಿಗೆ ಹಿನ್ನಡೆ ಕೂಡ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ‘ಪ್ರೀತಿ’ ವಿಚಾರದ ಬಗ್ಗೆ ಮಾತನಾಡುವಂತೆ ಪ್ರಿನ್ಸಿಪಾಲ್ ರಘು ಕೇಳಿದರು. ಈ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ತಿಳಿಸಿದರು. ಈ ಪೈಕಿ ರಕ್ಷಿತಾರವರು ಪ್ರೀತಿ ವಿಚಾರದಲ್ಲಿ ಹೇಳಿದ ಮಾತು ಗಮನ ಸೆಳೆದಿದೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ.
ನನ್ನ ಮನೆಯಲ್ಲಿ ಇರುವಾಗ ಅಮ್ಮ ತಿಂಡಿ ಮಾಡಿಕೊಡ್ತಾ ಇದ್ದಳು. ನಾನು ಈ ತಿಂಡಿ ಬೇಡ, ಉಪ್ಪು ಆಗಿದೆ, ಖಾರ ಆಗಿದೆ ಎಂದೆಲ್ಲ ಹೇಳುತ್ತಿದ್ದೆ. ತಿನ್ನು ಎಂದು ಅವರು ಹೇಳಿದರೂ ನಾನು ತಿನ್ನುತ್ತಿರಲಿಲ್ಲ. ಆ ಟೈಮ್ ಅಲ್ಲಿ ಅದರ ವ್ಯಾಲ್ಯೂ, ಅವರು ತೋರಿಸುತ್ತಿದ್ದ ಪ್ರೀತಿ ಗೊತ್ತಾಗಲಿಲ್ಲ. ಈ ತಪ್ಪನ್ನು ನಾನು ಜೀವನದಲ್ಲಿ ಯಾವಾಗಲೂ ಮಾಡಲ್ಲ. ಮನೆಗೆ ಹೋದಾಗ ಏನೇ ಮಾಡಿದ್ರೂ ತಿನ್ನುತ್ತೇನೆ, ಕಂಪ್ಲೇಂಟ್ ಮಾಡಲ್ಲ’ ಎಂದಿದ್ದಾರೆ ರಕ್ಷಿತಾ.
ಇದನ್ನೂ ಓದಿ : ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಸುಪ್ರೀಂ ಕೋರ್ಟ್ ಗರಂ | ಮೇಲ್ಮನವಿ ಅರ್ಜಿ ವಜಾ!



















