‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಹಾಗೂ ಕಾವ್ಯ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಹೀಗಾಗಿ, ಗಿಲ್ಲಿ ನಟ ಅವರು ಸಮಯ ಸಿಕ್ಕಾಗಲೆಲ್ಲ ಕಾವ್ಯಾ ಜೊತೆ ಇರುತ್ತಾರೆ. ಗಿಲ್ಲಿಯು ಕಾವ್ಯ ಜಪ ಮಾಡುತ್ತಿರುವುದು ಸಹಿಸಲಾರದೇ ರಿಷಾ ಗಿಲ್ಲಿ ಮಧ್ಯೆ ದೊಡ್ಡ ಫೈಟ್ ಎದುರಾಗಿದೆ.
ಗಿಲ್ಲಿ ಕಾವ್ಯನ ಕಾಲೆಳೆಯುತ್ತಿರುವಾಗ ರಿಷಾ ಕಾವ್ಯನಿಗೆ ಬಕೆಟ್ ಹಿಡಿಯುತ್ತಿದ್ದೀಯಾ ಎಂದು ಗಿಲ್ಲಿಗೆ ಕೇಳಿದಳು. ಇದಕ್ಕೆ ಪ್ರತಿಯಾಗಿ ನೀನು ಮನೆಯಲ್ಲಿರುವ 15 ಜನಕ್ಕೂ ಬಕೆಟ್ ಹಿಡಿತಾ ಇದಿಯಾ ಎಂದು ಆರಂಭವಾದ ಗಲಾಟೆ ನಂತರ ಬಕೆಟ್ ಹೋಗಿ ಡ್ರಂ ಆಗಿ ತಿರುಗಿತು.
ರಿಷಾ ಸುಮ್ಮಸುಮ್ಮನೆ ಕಾಲುಕೆರೆದುಕೊಂಡು ಜಗಳಕ್ಕೆ ಮುಂದಾಗಿದ್ದಾಳೆ ಎಂದು ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಬಗ್ಗೆ ಮರ್ಸಿಡಿಸ್ ಬೆಂಜ್ CEO ಮೆಚ್ಚುಗೆ ಮಾತು | ಟೀಕಾಕಾರರಿಗೆ ವಿಡಿಯೋ ಸಮೇತ ಡಿಸಿಎಂ ಡಿಕೆಶಿ ತಿರುಗೇಟು!



















