ರಷ್ಯಾ, ವಿಶ್ವ ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ವಿಶ್ವದ ಮೊದಲ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿ “ಬ್ಯೂರೆವೆಸ್ಟ್ನಿಕ್” ಪರೀಕ್ಷೆಯೂ ಯಶಸ್ವಿಯಾಗಿದೆ. ಈ ಕ್ಷಿಪಣಿ ಹಾರಾಟದಿಂದ ಜಾಗತಿಕ ಶಕ್ತಿಸಮತೋಲನದಲ್ಲೇ ಹೊಸ ತಿರುವು ಕಾಣಬಹುದಾಗಿದೆ.
ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಗಳ ಪೈಕಿ ರಷ್ಯಾ ಸದಾ ಅಗ್ರ ಸ್ಥಾನದಲ್ಲೇ ಇರುತ್ತದೆ. ಅಣ್ವಸ್ತ್ರ ಶಕ್ತಿ, ಆಧುನಿಕ ಕ್ಷಿಪಣಿ ತಂತ್ರಜ್ಞಾನ, ಯುದ್ಧವಿಮಾನಗಳು ಮತ್ತು ಸೈಬರ್ ಯುದ್ಧಗಳಂತಹ ಎಲ್ಲಾಸಾಮರ್ಥ್ಯಗಳಿಂದ, ರಷ್ಯಾ ಇಂದು ಕೂಡ ಜಾಗತಿಕ ಭದ್ರತೆಯ ಕೇಂದ್ರಬಿಂದುವಾಗಿದೆ. ರಷ್ಯಾದ ಭೂಸೇನೆ ಅಂತೂ ಪ್ರಪಂಚದ ಅತಿ ದೊಡ್ಡ ಶಕ್ತಿಶಾಲಿ ಸೇನೆಗಳಲ್ಲಿ ಒಂದು. ಸುಮಾರು 10 ಲಕ್ಷ ಸಕ್ರಿಯ ಸೈನಿಕರು ಮತ್ತು 20 ಲಕ್ಷ ಮೀಸಲು ಪಡೆಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ 6,000ಕ್ಕೂ ಹೆಚ್ಚು ಅಣ್ವಸ್ತ್ರಗಳು ರಷ್ಯಾ ಬಳಿ ಇದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಅಣ್ವಸ್ತ್ರ ಹೊಂದಿರುವ ದೇಶವಾಗಿದೆ. ಅಂತೆಯೇ ಈಗ ಮತ್ತೊಂದು ಸಾಧನೆಗೈಯಲು ರಷ್ಯಾ ಮುಂದಾಗಿದೆ.
ಹೌದು.. ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯಾದ ಬ್ಯೂರೆವೆಸ್ಟ್ನಿಕ್‌ನ್ನು ಪರೀಕ್ಷಿಸುವಲ್ಲಿ ರಷ್ಯಾ ಯಶಸ್ವಿಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಬೇರೆ ಯಾರೂ ಹೊಂದಿರದ ಆಯುಧ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಕ್ರೂಸ್ ಕ್ಷಿಪಣಿ ಪರಮಾಣು ರಿಯಾಕ್ಟರ್‌ನಿಂದ ಶಕ್ತಿ ಪಡೆಯುತ್ತಿದ್ದು,ಯಾವುದೇ ಮಿತಿ ಇಲ್ಲದೆ ಹಾರಾಬಹುದಾಗಿದೆ.
ರಷ್ಯಾದ ಮಿಲಿಟರಿ ಮುಖ್ಯಸ್ಥ ವ್ಯಾಲೆರಿ ಗೆರಾಸಿಮೊವ್ ಅವರ ವರದಿಯ ಪ್ರಕಾರ ಅಕ್ಟೋಬರ್ 21 ರಂದು ನಡೆದ ಇತ್ತೀಚಿನ ಪರೀಕ್ಷೆಯ ಸಮಯದಲ್ಲಿ ಕ್ಷಿಪಣಿಯು “ಸುಮಾರು 15 ಗಂಟೆಗಳ ಕಾಲ” 14,000 ಕಿ.ಮೀ.ಗಿಂತಲೂ ಹೆಚ್ಚು ದೂರ ಹಾರಿತು. ಮತ್ತು ಇದು ಪ್ರಪಂಚದ ಯಾವುದೇ ಮೂಲೆಯನ್ನು ತಲುಪುವ ಶಕ್ತಿ ಹೊಂದಿದೆ ಎಂದರು.
ರಷ್ಯಾದ ಈ ಬೆಳವಣಿಗೆ ಕಂಡು ಅಮೆರಿಕ, ನಾಟೋ ಮತ್ತು ಉಕ್ರೇನ್ ರಾಷ್ಟ್ರಗಳು ಬಹಳ ಚಿಂತೆಗೀಡಾಗಿವೆ. ಇದರಿಂದ ಇನ್ನೊಂದು ಶೀತಲ ಸಮರವೂ ಸಂಭವಿಸಬಹುದು. ಈ ದೇಶಗಳು ಕ್ಷೀಪಣಿ ತಂತ್ರಜ್ಙಾನವನ್ನು ಪುನರ್ ವಿಮರ್ಶೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇದೀಗ ಇವುಗಳು ಪರಮಾಣು ಚಾಲಿತ ಕ್ಷಿಪಣಿಗಳು ಪರಿಸರಕ್ಕೆ ಹಾನಿ ಮಾಡುತ್ತವೆ ಎಂದು ಹೇಳುತ್ತಿವೆ.
ಶಕ್ತಿಯ ಹೊಸ ಯುಗಕ್ಕೆ ಕಾಲಿಟ್ಟಾಂತಾಗಿದೆ. ಈ ಕ್ಷಿಪಣಿ ಅಣ್ವಸ್ತ್ರ ಯುಗದ ಹೊಸ ಅಧ್ಯಾಯವನ್ನೇ ತೆರೆದಿಟ್ಟಿವೆ. ಪುಟಿನ್ ಹೇಳುದಂತೆ ಇದು ನಮ್ಮ ರಾಷ್ಟ್ರದ ಭದ್ರತೆಗೆ ಮಾತ್ರವಲ್ಲ, ವಿಶ್ವಕ್ಕೆ ಒಂದು ಎಚ್ಚರಿಕೆ ಸಂದೇಶವೂ ಹೌದು.
ಇದನ್ನೂ ಓದಿ : ಪ್ರೀತಿ ಹೆಸರಲ್ಲಿ ಅತ್ಯಾಚಾರಕ್ಕೆ ಯತ್ನ| ಕೆರೆದೊಯ್ಯುವ ವೇಳೆ ಅಪಘಾತ; ಬಾಲಕಿ ದುರ್ಮರಣ



















