ಬೆಂಗಳೂರು: ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು, ದೇಶದ ಸೇವೆ ಮಾಡಬೇಕು ಎಂಬುದು ಲಕ್ಷಾಂತರ ಯುವಕರ ಕನಸಾಗಿರುತ್ತದೆ. ಈ ಕನಸು ನನಸು ಮಾಡಿಕೊಳ್ಳಲು ಒಳ್ಳೆಯ ಅವಕಾಶವೊಂದು ಉದ್ಯೋಗಾಕಾಂಕ್ಷಿಗಳ ಮನೆಬಾಗಿಲಿಗೆ ಬಂದಿದೆ. ಹೌದು, ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿಯಲ್ಲಿ ಖಾಲಿ (Territorial Army Recruitment 2025) ಇರುವ 1,426 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಟೆರಿಟೋರಿಯಲ್ ಆರ್ಮಿ
ಒಟ್ಟು ಹುದ್ದೆಗಳು: 1,426
ಹುದ್ದೆಗಳ ಹೆಸರು: ಸೋಲ್ಜರ್ (ಸೈನಿಕ)
ನೇಮಕಾತಿ ವಿಧಾನ: ನೇರ ಸಂದರ್ಶನ
ಕರ್ನಾಟಕದಲ್ಲಿ ಸಂದರ್ಶನದ ದಿನಾಂಕ: ನವೆಂಬರ್ 21 ಹಾಗೂ 22
ಸೋಲ್ಜರ್ (ಜನರಲ್ ಡ್ಯೂಟಿ), ಸೋಲ್ಜರ್ (ಕ್ಲರ್ಕ್), ಸೋಲ್ಜರ್ (ಶೆಫ್ ಕಮ್ಯುನಿಟಿ), ಸೋಲ್ಜರ್ (ಮೆಸ್ ಕುಕ್), ಸೋಲ್ಜರ್ (ಟೈಲರ್), ಸೋಲ್ಜರ್ (ಹೌಸ್ ಕೀಪರ್) ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. 18ರಿಂದ 42 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಕರ್ನಾಟಕ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಟೆರಿಟೋರಿಯಲ್ ಆರ್ಮಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ನವೆಂಬರ್ 21ರಂದು ಕೊಪ್ಪಳ, ಧಾರವಾಡ, ಕಲಬುರಗಿ, ಕೊಡಗು, ಹಾಸನ ಸೇರಿ ಹಲವೆಡೆ ಸಂದರ್ಶನ ನಡೆಯಲಿದೆ. ನವೆಂಬರ್ 22ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ದಾವಣಗೆರೆ ಹಾಗೂ ಬೆಳಗಾವಿಯಲ್ಲಿ ಸಂದರ್ಶನ ನಡೆಯಲಿದೆ.
ಆಸಕ್ತಿಇರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊದಲು jointerritorialarmy.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಧಿಸೂಚನೆಯನ್ನು ಓದಿಕೊಂಡು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನದ ಬಳಿಕ ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಸಲಹೆಗಾರ ಹುದ್ದೆಗಳ ನೇಮಕಾತಿ: 40 ಸಾವಿರ ರೂ. ಸಂಬಳ



















