ದಾವಣಗೆರೆ : ಅನ್ನ ಭಾಗ್ಯ ಯೋಜನೆ ಅಡಿ ಬಡವರಿಗೆ ನೀಡುವ ದವಸ ಧಾನ್ಯಗಳಲ್ಲಿ ಬರೀ ಕಲ್ಲು, ಮಣ್ಣು ಮಿಶ್ರಿತ ಧಾನ್ಯಗಳೇ ಬರುತ್ತಿವೆ. ಇದರಿಂದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೋಗಲೂರು ಗ್ರಾಮಸ್ಥರು ಆಕ್ರೋಶಿಸುತ್ತಿದ್ದಾರೆ.

ಬಿಪಿಎಲ್ ಕಾರ್ಡ್‌ದಾರರಿಗೆ ನೀಡುವ ಅಕ್ಕಿ, ರಾಗಿ ಸಂಪೂರ್ಣ ದೂಳು, ಕಲ್ಲು ಮಣ್ಣುಗಳಿಂದ ಕೂಡಿದ್ದು, ತಿನ್ನಲು ಯೋಗ್ಯವಲ್ಲದ ಕಳಪೆ ಅಕ್ಕಿ, ರಾಗಿ ನೀಡಲಾಗಿದೆ. ಇಂತಹ ಕಳಪೆ ಧಾನ್ಯಗಳನ್ನು ಪ್ರಾಣಿ ಪಕ್ಷಿಗಳು ಕೂಡ ತಿನ್ನುವುದಿಲ್ಲ ಎಂದು ಆಕ್ರೋಶಿಸುತ್ತಿದ್ದಾರೆ.
ಈ ಬಗ್ಗೆ ಆಹಾರ ಸರಬರಾಜು ಅಧಿಕಾರಿಗಳು ಪರಿಶೀಲನೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಸರ್ಕಾರದಿಂದ ಕೊಡುವುದಾದರೆ ಒಳ್ಳೆಯ ಅಕ್ಕಿ, ರಾಗಿ ಕೊಡಲಿ ಇಲ್ಲದಿದ್ದರೆ ಬೇಡ ಎಂದು ಜನರು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಇದನ್ನೂ ಓದಿ :ರೈತರ ಖಾತೆಗೆ 2 ಸಾವಿರ ರೂ. ಜಮೆ ಯಾವಾಗ? ಇಲ್ಲಿದೆ ಹೊಸ ಮಾಹಿತಿ

















