ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಸಂಜಯನಗರದಲ್ಲಿರುವ ಪ್ರಸಿದ್ದ ಶ್ರೀವಳ್ಳಿ ದೇವಸೇನ ಸಮೇತ ಶ್ರೀ ಸುಬ್ರಮಣ್ಯ ಮತ್ತು ನಾಗದೇವತೆಗಳ ಸನ್ನಿಧಿಯಲ್ಲಿ ಇಂದು 9ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೇರವೇರಿದೆ.

ಶ್ರೀವಳ್ಳಿ ದೇವಸೇನ ಸಮೇತ ಶ್ರೀ ಸುಬ್ರಮಣ್ಯ ಮತ್ತು ನಾಗದೇವತೆಗಳ ಸನ್ನಿಧಿಯಲ್ಲಿ ನಡೆದ 9ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ.

9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ ವಾಚನ ಶ್ರೀ ಗಣಪತಿ, ನವಗ್ರಹ, ಸುಬ್ರಮಣ್ಯ, ನಾಗದೇವರಿಗೆ ಕಳಾಹೋಮಗಳು ನಂತರ ರುದ್ರಾಭಿಷೇಕ ಸೇವೆ ಸಮರ್ಪಿಸಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ಬಂದತಹ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಗಿದೆ.

ಈ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು, ತನು, ಮನ, ಧನ ಸಹಾಯ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : ‘ಕಾಂತಾರ : ಚಾಪ್ಟರ್ 1’ OTT ರಿಲೀಸ್ ಡೇಟ್ ಅನೌನ್ಸ್ | ಸಿನಿಮಾವನ್ನು ಎಲ್ಲಿ? ಯಾವಾಗ ನೋಡಬಹುದು?



















