ಉಡುಪಿ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧವಾಗಿ ಪ್ರಿಯಾಂಕ ಖರ್ಗೆ ಆಡಿರುವ ಮಾತುಗಳು ಅತಿರೇಕದಿಂದ ಕೂಡಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಂಸದ “ಕಲ್ಲಡ್ಕ ಡಾ.ಪ್ರಭಾಕರ ಭಟ್ ರವರು ದೇಶಕ್ಕಾಗಿ ಬದುಕಿನ ಹಿರಿಯರು. ವಯಸ್ಸಿನಲ್ಲೂ ಅವರು ಸಚಿವ ಪ್ರಿಯಾಂಕ್ ಖರ್ಗೆಯವರ ಸಮಾನರು. ಬಡ ಮಕ್ಕಳಿಗ ದೇಶಭಕ್ತಿಭರಿತ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರಮುಖರು. ಅಂತಹಾ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತ ಷಡ್ಯಂತ್ರ ಹೂಡಿ ಕೇಸು ದಾಖಲಿಸಿದೆ. ಕಾನೂನಿಗೆ ಗೌರವ ಕೊಡುತ್ತೇವೆ. ಆದರೆ ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆಯವರ ಮಾತುಗಳು ಅತಿರೇಕದಿಂದ ಕೂಡಿದೆ. “ಅವರಪ್ಪ” ಎಂಬಂತಹಾ ಶಬ್ದವು ಜನರಿಂದ ಆಯ್ಕೆಯಾದ ಓರ್ವ ಸಚಿವನಿಂದ ಬರುತ್ತದೆ ಎಂದರೆ ಇದು ಸಹ್ಯವಲ್ಲ. ಪರ ವಿರೋಧ ಸಾಮಾನ್ಯ. ಆದರೆ ಟೀಕಿಸುವಾಗ ತನಗೆ ಇರುವ ಜವಬ್ದಾರಿ ಏನೆಂಬುದನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕು. ಮತ್ತು ತಮ್ಮ ಸಂಪುಟದ ಸಚಿವರು ಹೀಗೆಲ್ಲಾ ಬಾಯಿಗೆ ಬಂದ ಹಾಗೆ ಮಾತನಾಡುವಾಗ ಅವರಿಗೆ ಸ್ವಲ್ಪ ಬುದ್ಧಿ ಹೇಳಬೇಕೆಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತೇನೆ”. ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪಿಎಂಇಜಿಪಿ ಯೋಜನೆಯಡಿಯಲ್ಲಿ ಸಬ್ಸಿಡಿ ಲೋನ್ ಕೊಡಿಸುವುದಾಗಿ 1.45 ಕೋಟಿ ರೂ ವಂಚನೆ; ಮಹಿಳೆಯ ಬಂಧನ!



















