ಬೆಂಗಳೂರು: ಷೇರು ಮಾರುಕಟ್ಟೆ ಕುಸಿತದಿಂದಾಗಿ ಹೆಚ್ಚಿನ ಜನ ಷೇರುಗಳ ಖರೀದಿ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆ ಬದಲು ಸುರಕ್ಷಿತ ಹೂಡಿಕೆಯಾದ ಬ್ಯಾಂಕ್ ಎಫ್ ಡಿ (ಫಿಕ್ಸೆಡ್ ಡೆಪಾಸಿಟ್) ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಹಿರಿಯ ನಾಗರಿಕರಿಗೆ ಬಹುತೇಕ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿದರವನ್ನು ನೀಡುತ್ತಿವೆ. ಹಾಗಾದರೆ, ಅತಿ ಹೆಚ್ಚು ಎಫ್ ಡಿ ನೀಡುವ ದೇಶದ 10 ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ. ಬಡ್ಡಿದರವು ಹಿರಿಯ ನಾಗರಿಕರಿಗೆ ಮಾತ್ರ ಅನ್ವಯ ಎಂಬುದು ನೆನಪಿರಲಿ.
- ಇಎಸ್ಎಎಫ್ ಸ್ಮಾಲ್ ಫೈನಾನ್ಸ್: 444 ದಿನಗಳ ಎಫ್ ಡಿಗೆ ಶೇ.8.10ರಷ್ಟು ಬಡ್ಡಿ
- ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 2, 3 ಹಾಗೂ 5 ವರ್ಷಗಳ ಹೂಡಿಕೆಎ ಶೇ.8ರಷ್ಟು ಬಡ್ಡಿದರ
- ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 5 ವರ್ಷಗಳವರೆಗಿನ ಎಫ್ ಡಿಗೆ ಶೇ.8.10ರಷ್ಟು ಇಂಟರೆಸ್ಟ್
- ಉತ್ಕರ್ಷ್ ಸ್ಮಾನ್ ಫೈನಾನ್ಸ್ ಬ್ಯಾಂಕ್: 2, 3 ವರ್ಷಗಳ ಹೂಡಿಕೆಗೆ ಶೇ.8.15ರಷ್ಟು ರಿಟರ್ನ್ಸ್
- ಬಂಧನ್ ಬ್ಯಾಂಕ್: 2ರಿಂದ 3 ವರ್ಷಗಳ ಹೂಡಿಕೆಗೆ ಶೇ.7.7ರಷ್ಟು ಬಡ್ಡಿ
- ಡಿಸಿಬಿ ಬ್ಯಾಂಕ್: ಮೂರುವರೆಯಿಂದ ನಾಲ್ಕು ವರ್ಷದ ಹೂಡಿಕೆಗೆ ಶೇ.7.7ರಷ್ಟು ಇಂಟರೆಸ್ಟ್
- ಆರ್ ಬಿ ಎಲ್ ಬ್ಯಾಂಕ್: 3 ವರ್ಷಗಳ ಹೂಡಿಕೆಗೆ ಶೇ.7.7ರಷ್ಟು ರಿಟರ್ನ್ಸ್
- ಯೆಸ್ ಬ್ಯಾಂಕ್: 3ರಿಂದ 5 ವರ್ಷಗಳ ಹೂಡಿಕೆಗೆ ಶೇ.7.75ರಷ್ಟು ಬಡ್ಡಿ
- ಬ್ಯಾಂಕ್ ಆಫ್ ಮಹಾರಾಷ್ಟ್ರ: ಒಂದು ವರ್ಷದ ಹೂಡಿಕೆಗೆ ಶೇ.7.2ರಷ್ಟು ಇಂಟರೆಸ್ಟ್
- ಇಂಡಿಯನ್ ಬ್ಯಾಂಕ್: ಒಂದೂವರೆ ವರ್ಷದ ಹೂಡಿಕೆಗೆ ಶೇ.7.2ರಷ್ಟು ಬಡ್ಡಿ
ಗಮನಿಸಿ:
ಲೇಖನದಲ್ಲಿ ನೀಡಲಾದ ಬ್ಯಾಂಕ್ ಗಳ ಪಟ್ಟಿಯಲ್ಲಿ ಖಾಸಗಿ ಬ್ಯಾಂಕ್ ಗಳು, ಸಣ್ಣ ಹಣಕಾಸು ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಇವೆ. ಇಲ್ಲಿ ನಾವು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಬಡ್ಡಿದರಕ್ಕೆ ಸಂಬಂಧಿಸಿದಂತೆ ಲೇಖನ ಪ್ರಕಟಿಸಿದ್ದೇವೆ. ಇದು ನೀವು ಹೂಡಿಕೆ ಮಾಡಲು ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರನ್ನು ಸಂಪರ್ಕಿಸುವುದು ಅತ್ಯವಶ್ಯಕ.
ಇದನ್ನೂ ಓದಿ: ಕೃಷಿ ವಿಶ್ವವಿದ್ಯಾಲಯದಲ್ಲಿ 3 ಹುದ್ದೆಗಳ ನೇಮಕಾತಿ: ನೇರ ಸಂದರ್ಶನದ ದಿನಾಂಕದ ಇಲ್ಲಿದೆ



















