ಹಾಸನ : ಟೈಲರ್ ಮಹಿಳೆ ವಿರುದ್ಧ ಕೋಟಿ ವಂಚನೆ ಆರೋಪ ಹಿನ್ನಲೆ ನಡು ರಸ್ತೆಯಲ್ಲಿ ಜಡೆ ಹಿಡಿದು ಗ್ರಾಹಕರು ತಳಿಸಿದ್ದಾರೆ. ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿ ಮೇಲೆ ಹಲ್ಲೆ ನಡೆದಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗ್ರಾಹಕರಿಂದ ಲಕ್ಷಾಂತರ ಹಣ ಪಡೆದು ಚಿನ್ನಾಭರಣ ಅಡವಿಟ್ಟು ಲಕ್ಷ ಲಕ್ಷ ಸಾಲ ನೀಡುತ್ತಿದ್ದಂತೆ ಮೋಸಮಾಡಿದ್ದಾರೆ. ಸುಮಾರು 3 ಕೋಟಿಗೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ.
ಕೊಡಚಾದ್ರಿ ಚಿಟ್ಸ್ ನಲ್ಲಿ 1 ಕೋಟಿ ರೂ ಚೀಟಿ ಹಾಕಿದ್ದೇನೆ ಎಂದು ಎಲ್ಲರಿಗೂ ಸ್ಲಿಪ್ ತೋರಿಸಿ ಪಂಗನಾಮ ಹಾಕಿದ್ದಾಳೆ. ಹಾಸನದಲ್ಲಿ ಒಂದು ಕೋಟಿ ರೂ. ಮನೆ ಖರೀದಿಸಿದ್ದೇನೆಂದು ಹೇಳಿ ಸಾಲ ಪಡೆದಿದ್ದ ವಂಚಕಿ ಜ್ಯೋತಿ, ಹತ್ತಾರು ವರ್ಷಗಳಿಂದ ಡ್ರೆಸ್ ಮೇಕರ್ಸ್ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದಳು. ಹೆಂಡತಿ ವಂಚನೆಗೆ ಪತಿ ವಿರೂಪಾಕ್ಷಪ್ಪ ಸಾಥ್ ನೀಡಿದ್ದಾನೆ. ಓರ್ವ ಮಹಿಳೆಯಿಂದಲೇ 45 ಲಕ್ಷ ಹಣ ಪಡೆದಿದ್ದಾಳೆ.
ಇದೀಗಹೇಮಾವತಿಯಿಂದ ಬೇರೆ ಯಾರು ಮೋಸ ಹೋಗಬೇಡಿಯೆಂದು ವಂಚಕಿ ವಿರುದ್ಧ ಕಾನೂನು ಕ್ರಮಕ್ಕೆ ನೊಂದವರ ಒತ್ತಾಯಿಸುತ್ತಿದ್ದಾರೆ.
ಇದನ್ನು ಓದಿ : ಪಾಕ್ ಜನರಲ್‌ಗೆ ವಿವಾದಿತ ನಕ್ಷೆ ನೀಡಿದ ಬಾಂಗ್ಲಾದ ಯೂನುಸ್: ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದ ಭಾಗವೆಂದು ಬಿಂಬಿಸಿದ ನಕ್ಷೆ



















