ಮಳಿಯಾಳಂ ‘ಡೀಯಸ್ ಈರೇ’ ಸಿನಿಮಾದಲ್ಲಿ ಪ್ರಣವ್ ಮೋಹನ್ಲಾಲ್ ಅವರು ಡಿಫರೆಂಟ್ ಪಾತ್ರ ಮಾಡಿದ್ದಾರೆ. ಅಂದಹಾಗೆ, ಇದೊಂದು ಹಾರರ್ ಸಿನಿಮಾ. ಈಗ ಟ್ರೇಲರ್ ಬಿಡುಗಡೆ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
ಡೀಯಸ್ ಈರೇ’ ಸಿನಿಮಾಗೆ ರಾಹುಲ್ ಸದಾಶಿವನ್ ಅವರು ನಿರ್ದೇಶನ ಮಾಡಿದ್ದಾರೆ. ಎಸ್. ಶಶಿಕಾಂತ್ ಹಾಗೂ ಚಕ್ರವರ್ತಿ ರಾಮಚಂದ್ರ ಅವರ ‘ನೈಟ್ ಶಿಫ್ಟ್ ಸ್ಟುಡಿಯೋ’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. 2 ನಿಮಿಷ ಅವಧಿಯ ಟ್ರೇಲರ್ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಪ್ರಣವ್ ಮೋಹನ್ಲಾಲ್ ಅಭಿಮಾನಿಗಳಿಗೆ ಈ ಟ್ರೇಲರ್ ಇಷ್ಟ ಆಗಿದೆ.
ಈ ಸಿನಿಮಾದ ಶೀರ್ಷಿಕೆಗೆ The Day Of Wrath ಎಂಬ ಟ್ಯಾಗ್ ಲೈನ್ ಇದೆ. ಆ ಮೂಲಕ ಪ್ರೇಕ್ಷಕರ ಕೌತುಕವನ್ನು ಹೆಚ್ಚಿಸಲಾಗಿದೆ. ಈ ಚಿತ್ರದಲ್ಲಿ ಪ್ರಣವ್ ಮೋಹನ್ಲಾಲ್ ಜೊತೆ ಜಿಬಿನ್ ಗೋಪಿನಾಥ್, ಅರುಣ್ ಅಜಿಕುಮಾರ್, ಮನೋಹರಿ ಜಾಯ್ ಮುಂತಾದವರು ಕೂಡ ಅಭಿನಯಿಸಿದ್ದಾರೆ. ಅಕ್ಟೋಬರ್ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇಡೀ ಸಿನಿಮಾದಲ್ಲಿ ಪ್ರಣವ್ ಮೋಹನ್ಲಾಲ್ ಅವರ ಪಾತ್ರವೇ ಹೈಲೈಟ್ ಆಗಿರಲಿದೆ. ಟ್ರೇಲರ್ನಲ್ಲಿ ಆ ಬಗ್ಗೆ ಸುಳಿವು ಸಿಕ್ಕಿದೆ. ನಿರ್ದೇಶಕ ರಾಹುಲ್ ಸದಾಶಿವನ್ ಅವರು ಈಗಾಗಲೇ ಹಾರರ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ‘ರೆಡ್ ರೇನ್’, ‘ಭೂತಕಾಲಂ’, ‘ಭ್ರಮಾಯುಗಂ’ ಸಿನಿಮಾಗಳ ಬಳಿಕ ಅವರು ‘ಡೀಯಸ್ ಈರೇ’ ಚಿತ್ರವನ್ನು ಮಾಡಿದ್ದಾರೆ. ಆ ಕಾರಣದಿಂದಲೂ ಹೈಪ್ ಹೆಚ್ಚಿದೆ.
ಇದನ್ನು ಓದಿ : ಸಲ್ಮಾನ್ ಖಾನ್ ಟೆರರಿಸ್ಟ್ | ಪಾಕಿಸ್ತಾನ ಘೋಷಣೆ


















