ಚಿಕ್ಕಬಳ್ಳಾಪುರ : 17 ಗುಂಟೆ ಜಮೀನು ವಿಚಾರವಾಗಿ ಅಣ್ಣ ಇಲ್ಲದ ಸಮಯದಲ್ಲಿ ಅತ್ತಿಗೆ ಮೇಲೆ ಹಲ್ಲೆ ಮೈದುನಾ ಮಾಡಿದ್ದಾನೆ.
ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಮೀನು ವಿಚಾರವಾಗಿ ಅಣ್ಣ- ತಮ್ಮಂದಿರ ಗಲಾಟೆ ನಡೆದಿದ್ದು, ಅಣ್ಣ ಇಲ್ಲದ ಸಮಯದಲ್ಲಿ ಅತ್ತಿಗೆ ಮೇಲೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಡು ರಸ್ತೆಯಲ್ಲೇ ಹಲ್ಲೆ ಎಸಗಿದ್ದಾನೆ ಬಳಿಕ ಬಾವಿಗೆ ತಳ್ಳಿ ಕೊಲೆ ಮಾಡಲು ಮುಂದಾಗಿದ್ದಾನೆ. ಮುನಿಕೃಷ್ಣ ಎಂಬುವವನಿಂದ ಲಕ್ಷ್ಮಿದೇವಮ್ಮನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಈ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಗಾಯಾಳು ಲಕ್ಷ್ಮಿದೇವಮ್ಮಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



















