ಮೈಸೂರು : ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋದ ಇಬ್ಬರು ಸಹೋದರರು ನೀರು ಪಾಲಾಗಿದ್ದಾರೆ. ಈ ಘಟನೆ ಮೈಸೂರು ತಾಲೂಕಿನ ಬಡಗಲಹುಂಡಿಯಲ್ಲಿ ನಡೆದಿದೆ.
ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರ ನವ ವಿವಾಹಿತ ನಂದನ್ (25) ಮತ್ತು ಸಹೋದರನ ಪುತ್ರ ರಾಕೇಶ್ (20) ಸಾವನ್ನಪ್ಪಿದ್ದಾರೆ.ಈ ಪ್ರಕರಣಾ ವರುಣಾ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ನಿನ್ನೆ ಸಂಜೆ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಸಹೋದರರು ವರಣಾ ನಾಲೆಯಲ್ಲಿ ಈಜಲು ತರೆಳಿದ್ದ ಬಾಲಕ ಮಂಜು ನೀರಿನಲ್ಲಿ ಮುಳುಗುತ್ತಿದ್ದನ್ನ ಕಂಡು ರಕ್ಷಿಸಲು ಮುಂದಾದರು. ಬಳಿಕ ಮಂಜುವನ್ನು ರಕ್ಷಿಸಿದ್ದಾರೆ.ಬಳಿಕ ನಂದನ್, ರಾಕೇಶ್ ಇರ್ವರು ನೀರುಪಾಲಾಗಿದ್ದಾರೆ.
ಮೃತ ನಂದನ್, ರಾಕೇಶ್ ಇಬ್ಬರೂ ಸಹೋದರರ ಮಕ್ಕಳಾಗಿದ್ದು, ಹದಿನೈದು ದಿನಗಳ ಹಿಂದೆ ಅಷ್ಟೇ ನಂದನ್ ಪ್ರೀತಿಸಿ ಚನ್ನಪಟ್ಟಣ ಮೂಲದ ಯುವತಿಯನ್ನು ಮದುವೆಯಾಗಿದ್ದರು.



















