ತಿರುಪತಿ : ತಿರುಮಲ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ಹೆಸರಿನಲ್ಲಿ ಭಕ್ತರಿಗೆ ಕೋಟಿ ಕೋಟಿ ಹಣ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಿರುಪತಿ ಜಿಲ್ಲೆಯ ಚಂದ್ರಗಿರಿಯ ಹಳೆ ಪೇಟೆಯ ಬುರಿಗಾಲ ಅಶೋಕ್ ಕುಮಾರ್ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಈತ ರಾಕ್ ಸ್ಟಾರ್ ಈವೆಂಟ್ಸ್ ಹೆಸರಿನಲ್ಲಿ ನಕಲಿ ಈವೆಂಟ್ ಆರ್ಗನೈಸರ್ ಆಗಿ ವ್ಯವಹಿಸುತ್ತಿದ್ದನಂತೆ.
ತಿರುಮಲದಲ್ಲಿ ಸುಪ್ರಭಾತ ಸೇವೆ, ಕಲ್ಯಾಣೋತ್ಸವ, ರೂಮ್ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದನಂತೆ. ಅಶೋಕ್ ಕುಮಾರ್ ರೆಡ್ಡಿ ಭಕ್ತರಿಂದ ನಗದು ರೂಪದಲ್ಲಿ ಹಣ ಪಡೆದುಕೊಂಡು ಅವರಿಗೆ ಯಾವುದೇ ಬುಕ್ಕಿಂಗ್ ಮಾಡಿಕೊಡದೆ ಮೋಸ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಇದೀಗ ಆರೋಪಿ ವಿರುದ್ಧ ವಂಚನೆಗೆ ಒಳಗಾದ ಭಕ್ತರು ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ತಿರುಮಲ ಟುಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.



















