ಚಿತ್ರದುರ್ಗ: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಗಂಗಾ ನದಿಯಲ್ಲಿ ಮುಳುಗಿಸಿದಂತಾಯಿತು. ಎರಡುವರೆ ವರ್ಷ ಆದ ಮೇಲೆ ನಾನೆ ಸಿಎಂ ಎಂದು ಕುರ್ಚಿ ಮೇಲೆ ಟವೆಲ್ ಹಾಕಿದ್ದರು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ಯತೀಂದ್ರ ಹೇಳಿಕೆಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಅಶೋಕ್, ಡಿ.ಕೆ.ಶಿವಕುಮಾರ್‌ಗೆ ನಿರಾಸೆಯಾಗಿದೆ. ಮುಂದೆ ಎಂದೂ ಡಿ.ಕೆ. ಶಿವಕುಮಾರ್ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ಬೆಂಬಲಿಗರು ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ನವೆಂಬರ್ ಡಿಸೆಂಬರಲ್ಲಿ ಕ್ರಾಂತಿ ಆಗತ್ತದೆ ಎಂದು ಹೇಳಿದ್ದೆ, ಅವರು ಕ್ರಾಂತಿನೂ ಇಲ್ಲ, ಬ್ರಾಂತಿನೂ ಇಲ್ಲ ಎಂದು ಹೇಳಿದ್ದವರು ಬೆಳಗಾವಿಗೆ ಹೋಗಿ ಯತೀಂದ್ರ ಹೀಗೆ ಯಾಕೆ ಹೇಳುತ್ತಿದ್ದಾರೆ. ಎಲ್ಲಾ ಕಿರಿಕ್ ಆಗುವುದು ಅಲ್ಲಿಂದಾನೆ. ಹೋದ ಬಾರಿ ಕಾಂಗ್ರೇಸ್ ಸರ್ಕಾರ ಬೀಳುವುದಕ್ಕೆ ಅಲ್ಲಿಂದಾನೆ ಶುರುವಾಗಿದ್ದು, ಬೆಳಗಾವಿಯಿಂದಲೆ ಕಾಂಗ್ರೇಸ್ ಸರ್ಕಾರ ಬೀಳುವುದಕ್ಕೆ ಯತೀಂದ್ರ ಗುದ್ದಲಿ ಪೂಜೆ ಮಾಡಿದ್ದಾರೆ. ನಮ್ಮನ್ನು ಸುಳ್ಳು ಎನ್ನುತ್ತಿದ್ದರು. ಅದು ಈಗ ನಿಜ ಆಗುತ್ತಿದೆ ಎಂದು ಹೇಳಿದ್ದಾರೆ.