ಮಥುರಾ : ಮಥುರಾದಲ್ಲಿ ಗೂಡ್ಸ್ ರೈಲಿನ 12 ಬೋಗಿಗಳು ಹಳಿ ತಪ್ಪಿವೆ. ಈ ಸರಕು ಸಾಗಾಣಿಕ ರೈಲು ಆಗ್ರಾದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಆಗ್ರಾದಿಂದ ದೆಹಲಿ-ಘಾಜಿಯಾಬಾದ್‌ಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲು ಛತಿಕರ್ ಬಳಿ ಹಠಾತ್ತನೆ ಹಳಿತಪ್ಪಿದೆ. ಗೂಡ್ಸ್ ಹಳಿ ತಪ್ಪಿದ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು, ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಆಗಮಿಸಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ರೈಲ್ವೆ ಅಧಿಕಾರಿಗಳ ಪ್ರಕಾರ ಸುಮಾರು 12 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿವೆ. ರೈಲುಗಳನ್ನು ನಾಲ್ಕನೇ ಮಾರ್ಗಕ್ಕೆ ತಿರುಗಿಸಲಾಗಿದೆ. ಸುಗಮ ರೈಲು ಸಂಚಾರವನ್ನು ಖಚಿತಪಡಿಸಿಕೊಳ್ಳಲು ಹಳಿ ತಪ್ಪಿದ ಬೋಗಿಗಳನ್ನು ಇತರ ಹಳಿಗಳಿಂದ ತೆಗೆದುಹಾಕಲಾಗುತ್ತಿದೆ. ರೈಲ್ವೆಯ ಹಿರಿಯ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಹಳಿ ತಪ್ಪಿದ ಬೋಗಿಗಳನ್ನು ಹಳಿಗಳಿಂದ ಸ್ಥಳಾಂತರ ಮಾಡುತ್ತಿದ್ದಾರೆ.
ಮಾಹಿತಿಯ ಪ್ರಕಾರ ನಿನ್ನೆ ರಾತ್ರಿ 8:30 ಕ್ಕೆ ಅಪಘಾತ ಸಂಭವಿಸಿದೆ. ವೃಂದಾವನ-ಛತಿಖರ ಮಾರ್ಗದಲ್ಲಿ ಆಗ್ರಾದಿಂದ ದೆಹಲಿ-ಘಜಿಯಾಬಾದ್‌ಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲು ಪಿಲ್ಲರ್ ಸಂಖ್ಯೆ 1408ರಲ್ಲಿ ಹಠಾತ್ತನೆ ಹಳಿತಪ್ಪಿದೆ ಎಂದು ವರದಿಯಾಗಿದೆ. ಸರಕು ರೈಲಿನ ಹನ್ನೆರಡು ವ್ಯಾಗನ್‌ಗಳು ಪಲ್ಟಿಯಾಗಿ, ಕಲ್ಲಿದ್ದಲು ಮೂರನೇ ಮತ್ತು ನಾಲ್ಕನೇ ಮಾರ್ಗಗಳಲ್ಲಿ ಹರಡಿಕೊಂಡಿತ್ತು. ಮಾಹಿತಿ ಪಡೆದ ಕೂಡಲೇ ಆಗ್ರಾ ಎಡಿಆರ್‌ಎಂ ಮತ್ತು ಎನ್‌ಡಿಆರ್‌ಎಫ್ ಮತ್ತು ಆರ್‌ಪಿಎಫ್ ತಂಡ ಸೇರಿದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.