ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯ ಶೈವ ಮತ್ತು ಗಿಲ್ಲಿ ನಡುವಿನ ಬಾಂಧವ್ಯ ಹದಗೆಟ್ಟಿದೆ. ರಿಷಾ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ನಂತರ ಗಿಲ್ಲಿ ಕಾವ್ಯಾ ಅವರಿಂದ ದೂರವಾಗಿದ್ದಾರೆ. ಇದು ಬಿಗ್ ಬಾಸ್ ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ತ್ರಿಕೋನ ಕಥೆ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.
‘ಬಿಗ್ ಬಾಸ್’ ಮನೆಯಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಬಾಂಡಿಂಗ್ ಎಲ್ಲವನ್ನೂ ಮೀರಿದೆ. ಈಗ ಕಾವ್ಯ ಶೈವ ಅವರಿಂದ ಗಿಲ್ಲಿ ನಟ ದೂರವೇ ಆಗಿದ್ದಾರೆ. ಈ ವಿಚಾರದಲ್ಲಿ ಕಾವ್ಯಗೂ ಸ್ವಲ್ಪ ಬೇಸರ ಇದೆ. ಆದರೆ, ಅವರು ಅದನ್ನು ತೋರಿಸಿಕೊಳ್ಳದೆ ಆಟ ಮುಂದುವರಿಸಿದ್ದಾರೆ. ಇವರ ನಡುವೆ ಇರೋ ಕೆಮಿಸ್ಟ್ರಿ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಆದರೆ, ಈಗ ರಿಶಾ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಗಿಲ್ಲಿ ಅವರ ಹಿಂದೆ ಓಡಾಡುತ್ತಾ ಇದ್ದಾರೆ.

ಕಾವ್ಯ ಆಗಾಗ ಗಿಲ್ಲಿಯನ್ನು ಸಹೋದರ ಎಂದು ಕರೆಯುವ ಪ್ರಯತ್ನ ಮಾಡಿದ್ದು ಇದೆ. ಇದು ಗಿಲ್ಲಿಗೆ ಇಷ್ಟ ಆಗುತ್ತಿಲ್ಲ. ಈ ಕಾರಣಕ್ಕೆ ಕಾವ್ಯಾನ ರೇಗಿಸಬೇಕು ಎಂದು ಗಿಲ್ಲಿ ನಿರ್ಧರಿಸಿದ್ದು, ಹೀಗಾಗಿ, ರಿಷಾ ಗೌಡ ಹಿಂದೆ ಸುತ್ತಾಡುತ್ತಿದ್ದಾರೆ.
ಕಾವ್ಯಗೆ ಉರಿಸಬೇಕು ಎಂಬ ಕಾರಣಕ್ಕೆ ಗಿಲ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಜಾನ್ವಿ ಹಾಗೂ ಅಶ್ವಿನಿ ಗೌಡ ಕೂಡ ಇದೇ ವಿಚಾರವನ್ನು ಚರ್ಚೆ ಮಾಡಿದ್ದಾರೆ. ‘ಹೊಸ ನೀರು ಬಂದಾಗ, ಹಳೆ ನೀರನ್ನು ಗಿಲ್ಲಿ ಮರೆತಿದ್ದಾರೆ’ ಎಂಬ ಮಾತುಗಳು ಚರ್ಚೆಗೆ ಕಾರಣ ಆಗಿದೆ.