ಉಡುಪಿ : ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಕಾರ್ಕಳದ ನಿವಾಸಿ ಅಭಿಷೇಕ್ ಆಚಾರ್ಯ(23) ಇವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನರ್ಸ್ ನಿರೀಕ್ಷಾಳನ್ನು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ನೇಹಿತೆಯರ ಡ್ರೆಸ್ ಚೇಂಜ್ ಮಾಡುವಂತಹ ವಿಡಿಯೋವನ್ನು ರಹಸ್ಯವಾಗಿ ಸೆರೆ ಹಿಡಿದು ವೈರಲ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ನಿರೀಕ್ಷಾ ಳನ್ನು ಮಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ, ಪ್ರಸಕ್ತ ಮಂಗಳೂರು ಕಳಸಾದ ನಿವಾಸಿಯಾಗಿರುವ ನಿರೀಕ್ಷಾ ಹಾಗೂ ಇಬ್ಬರೂ ಯುವತಿಯರು ಒಂದೇ ರೂಮಿನಲ್ಲಿ ವಾಸಿಸುತಿದ್ದರು. ಈ ವೇಳೆಯಲ್ಲಿ ತನ್ನ ಸ್ನೇಹಿತೆಯರು ಡ್ರೆಸ್ ಚೇಂಜ್ ಮಾಡುತ್ತಿರುವ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿದು ಶೇರ್ ಮಾಡಿದ್ದಾಳೆ ಎನ್ನುವಂತದ್ದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಈ ಸಂಬಂಧ ಇಬ್ಬರು ಯುವತಿಯರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಪೊಲೀಸರು ಸೂಕ್ತ ತನಿಖೆ ನೆಡೆಸಿ ನಿರೀಕ್ಷಾಳನ್ನು ವಶಕ್ಕೆ ಪಡೆದಿದ್ದು, ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೆಲ ದಿನಗಳ ಹಿಂದೆ ಬರೋಬ್ಬರಿ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟು ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದ.ತನ್ನ ಖಾಸಗಿ ವಿಡಿಯೋ ಸೆರೆಹಿಡಿದು ಹಣ ನೀಡುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದ. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯನ್ನು ನಡೆಸುತ್ತಿದ್ದಾರೆ. ಸುಮಾರು ನಾಲ್ವರ ಹೆಸರನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದ್ದು, ಅದರಲ್ಲಿ ಒಂದು ಹೆಸರು ಇದೇ ನಿರೀಕ್ಷಳಾದಾಗಿತ್ತು.
ತನಿಖೆ ನಡೆಸಿದ ಪೊಲೀಸರು ಪ್ರಾಥಮಿಕ ಹಂತದಲ್ಲಿ ಹನಿ ಟ್ರ್ಯಾಪ್ ಆಗಿದ್ದಕ್ಕೆ ಯಾವುದೇ ಪುರಾವೆಗಳು ಸಿಗುತ್ತಿಲ್ಲ ಎನ್ನುವಂತಹ ಮಾಹಿತಿಯನ್ನು ಉಡುಪಿ ಪೊಲೀಸರು ನೀಡಿದ್ದರು.ಆದರೆ ಇದೀಗ ಬೇರೊಂದು ಪ್ರಕರಣ ಸಂಬಂಧ ನಿರೀಕ್ಷಾಳನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಪ್ರಕರಣ ಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಆಚಾರ್ಯ ಮೊಬೈಲ್ ನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗಿದ್ದು, ಡೆತ್ ನೋಟ್ ನಲ್ಲಿರುವ ಕೈಬರಹದ ದೃಢಿಕರಣ ಕಾರ್ಯ ಪ್ರಗತಿಯಲ್ಲಿರುತ್ತದೆ.