ಬೆಂಗಳೂರು : ರಸ್ತೆ, ಮೈದಾನಗಳಲ್ಲಿ ನಮಾಜ್ ಮಾಡೋರು ಅನುಮತಿ ಪಡೆದುಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ನಮಾಜ್‌ಗೆ ಅವಕಾಶ ಕೊಡಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಕೂಡ ಪರವಾನಗಿ ಪಡೆಯಬೇಕು. ಅವರು ಅರ್ಜಿ ಹಾಕಿ ಅನುಮತಿ ಪಡೆದುಕೊಳ್ಳಬೇಕು. ಈ ಸಂಬಂಧ ಯತ್ನಾಳ್ ಅವರು ಇಂಗ್ಲಿಷ್ನಲ್ಲಿ ಪತ್ರ ಬರೆದಿದ್ದೇ ವಿಶೇಷ ಅನಿಸುತ್ತದೆ. ಯಾರಿಗೆ ಸಂದೇಶ ಕೊಡುವುದಕ್ಕೆ ಇಂಗ್ಲಿಷ್ನಲ್ಲಿ ಪತ್ರ ಬರೆದಿದ್ದಾರೆ ಗೊತ್ತಿಲ್ಲ. ಸಿಎಂ ಅವರಿಗೆ ಗೊತ್ತಾಗಲಿ ಅಂತಾನೋ, ಅಮಿತ್ ಶಾಗೆ ಗೊತ್ತಾಗಲಿ ಎಂದು ಬರೆದ್ರಾ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ನಿಮ್ಮ ಸಂಘಟನೆಯ ವ್ಯಕ್ತಿ ಬೆದರಿಕೆ ಹಾಕ್ತಾರೆ. ಒಬ್ಬ ಬಿಜೆಪಿ ಲೀಡರ್ ಆದರೂ ಖಂಡಿಸಿದ್ದಿರಾ? ಸಿಜೆಐ ಮೇಲಿನ ಹಲ್ಲೆ ಯತ್ನ ಖಂಡಿಸಿಲ್ಲ. ಆರ್ಎಸ್ಎಸ್ ದೇಶಭಕ್ತರು, ನಿಮ್ಮ ಮನೆಗೂ ಬಂದರೂ ಬರಬಹುದು ಅಂತಾರೆ. ಅವರಿಗೆ ಹೇಳೋ ಶಕ್ತಿ ನಿಮಗೆ ಇಲ್ವಾ?. ತಪ್ಪು ಅಂತಾ ಹೇಳೋ ಶಕ್ತಿ ಇಲ್ವಾ? ನಮ್ಮ ನಿಮ್ಮ ವಿಚಾರ ಬೇರೆ ಇರಬಹುದು. ಕುಟುಂಬಕ್ಕೆ ಬೆದರಿಕೆ ಹಾಕೋದು ತಪ್ಪಲ್ವಾ? ಇದನ್ನು ಖಂಡಿಸಿದ್ದಾರಾ ಬಿಜೆಪಿಯವರು? ಎಂದು ಸಚಿವರು ಪ್ರಶ್ನಿಸಿದ್ಧಾರೆ.
ಸರ್ಕಾರಿ ಅಧಿಕಾರಿಗಳು ಆರ್ಎಸ್ಎಸ್ನಲ್ಲಿ ಭಾಗವಹಿಸಬಹುದು ಎಂಬ ಕೇಂದ್ರ ಸರ್ಕಾರದ ಆದೇಶದ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಅದನ್ನ ಜಾರಿಗೆ ತಂದಿದೆ. ಅದನ್ನು ಅಲ್ಲಿ ಮಾಡಲಿ. ಒಪ್ಪಿಕೊಳ್ಳೋಣ. ಆದರೆ ರಾಜ್ಯ ಸರ್ಕಾರದಲ್ಲಿ ಅಂತಹ ನಿಯಮ ಇಲ್ಲ. ಕೇಂದ್ರ ಸರ್ಕಾರದ್ದೇ ಬೇರೆ ನಿಯಮಗಳು ಇರುತ್ತವೆ. ರಾಜ್ಯದ್ದೆ ಬೇರೆ ಇರುತ್ತವೆ ಎಂದು ಹೇಳಿದ್ದಾರೆ.