ಬೆಂಗಳೂರು : ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನ ಭರ್ಜರಿಯಾಗಿ ಪ್ರತಿ ವರ್ಷವು ಕುಟುಂಬ, ಸ್ನೇಹಿತರ ಜೊತೆಗೂಡಿ ದೀಪಾವಳಿ ಆಚರಿಸುತ್ತಿದ್ದರು. ಆದರೆ ಇದೀಗ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಬದುಕಿನಲ್ಲಿ ಬೆಳಕಿಲ್ಲದ ದೀಪಾವಳಿಯಂತಾಗಿದೆ.
ಕಳೆದ ಬಾರಿ ದೀಪಾವಳಿ ಹಬ್ಬದ ಸಮಯದಲ್ಲೇ ದಾಸ ರಿಲೀಸ್ ಆಗಿದ್ದರು, ಆಗ ಮನೆಯಲ್ಲಿದ್ದರೂ ದೀಪಾವಳಿ ಆಚರಿಸದೆ ಬೆನ್ನು ನೋವಿನ ಹಿನ್ನಲೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
ಆದರೆ ಈ ವರ್ಷ ಹಾಸಿಗೆ ದಿಂಬಿಲ್ಲ, ಕ್ವಾರಂಟೈನ್ ಸೆಲ್ ನಲ್ಲೇ ಇರುವ ಅನಿವಾರ್ಯ ಸೃಷ್ಟಿಯಾಗಿದೆ. ಕನಿಷ್ಡ ಸೌಲಭ್ಯದ ವ್ಯವಸ್ಥೆ ಸರಿಯಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೊಟ್ಟಿರುವ ವರದಿಯಿಂದ ಬೇಸರಗೊಂಡಿದ್ದಾರೆ.
ಇತ್ತ ಬಿಟ್ಟು ಬಿಡದೆ ಕಾಡುತ್ತಿರುವ ಬೆನ್ನು ನೋವು, ಅತ್ತ ಕುಟುಂಬಸ್ಥರು ಯಾರೇ ಬಂದರು ಸರತಿ ಸಾಲಲ್ಲಿ ಎರಡು ಗಂಟೆ ಕಾದು ಬರಬೇಕಿದೆ ಕಾನೂನಿನ ಹೋರಾಟಕ್ಕೆ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಯಾರಿಂದಲೂ ದರ್ಶನ್ ಗೆ ಸಹಾಯದ ಮಾತಿಲ್ಲದಂತಾಗಿದೆ.